ನವದೆಹಲಿ: ಸರ್ಕಾರದ ಉಚಿತ ಯೋಜನೆಗಳಿಂದಾಗಿ ಜನರು ಸೋಮಾರಿಗಳಾಗುತ್ತಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಚಿತ ಯೋಜನೆ ಕೊಟ್ಟಿದ್ದಕ್ಕೆ ಹೆಣ್ಣುಮಕ್ಕಳು ಸೋಮಾರಿಗಳಾಗಿದ್ದಾರಾ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಯಾವುದೇ ಸ್ವಾಮೀಜಿಗಳ ಹೇಳಿಕೆಗೂ ಪ್ರತಿಕ್ರಿಯೆ ನೀಡಲ್ಲ. ಉಚಿತ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಈಗ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದರಿಂದ ಹೆಣ್ಣುಮಕ್ಕಳು ಸೋನಾರಿಗಳಾಗಿದ್ದಾರಾ? ಇಲ್ವಲ್ಲ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗುವುದು ಬೇಡವಾ? ಎಂದು ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆಯಿಂದ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಿಂದ ಯಜಮಾನಿಯರಿಗೆ ತಿಂಗಳಿಗೆ 2000 ಹಣ ಬರ್ವುದರಿಂದ ಅವರಿಗೆ ಆರ್ಥಿಕವಾಗಿ ಅನುಕೂಲಗಳಾಗುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದು, ಮಕ್ಕಳನ್ನು ಓದಿಸುವುದು ಬೇಡಾವಾ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಯಾವುದೇ ಯೋಜನೆಗಳಿಂದ ಸೋಮಾರಿಗಳಾಗುವುದಿಲ್ಲ, ಅದು ಜನರಿಗೆ ಅನುಕೂಲಕರವಾಗಿದೆ. ದುಡಿಯಲು ಇನ್ನಷ್ಟು ಶಕ್ತಿಗಳನ್ನು ನೀಡುತ್ತದೆ ಎಂದು ಹೇಳಿದರು.