ಮೈಸೂರು: ದಸರಾ ಉದ್ಘಾಟನೆಗೆ ಬನೌ ಮುಷ್ತಾಕ್ ಆಯ್ಕೆ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರ್. ಆಶೋಕ್ ಆರೋಪ ಮಾಡಿದ್ದೆಲ್ಲ ಸತ್ಯಾನಾ? ಅವರು ವಿಪಕ್ಷ ನಾಯಕನಾದ ತಕ್ಷಣ ಅವರು ಹೇಳಿದ್ದನ್ನೆಲ್ಲ ಕೇಳಬೇಕಾ? ಸುಳ್ಳು ಆರೋಪ ಮಾಡಿದರೆ ಅದು ನಿಜವಾಗಿ ಬಿಡುತ್ತಾ? ಎಂದು ಗರಂ ಆದರು.
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಆಯ್ಕೆ ಬಗ್ಗೆ ಸದನದ ಕಲಾದಲ್ಲಿ ಚರ್ಚೆಯಾಗಿತ್ತು. ಆಗ ಆರ್.ಅಶೋಕ್, ಸುನೀಲ್ ಕುಮಾರ್ ಏನು ಹೇಳಿದರು? ಆಗ ಒಪ್ಪಿಗೆ ನೀಡಿ ಈಗ ಆರೋಪಗಳನ್ನು ಮಾಡುತ್ತಾ ಮಾತನಾಡುತ್ತಿದ್ದಾರೆ. ಅಸತ್ಯದ ಮೇಲೆ ಚರ್ಚೆ ಮಾಡುತ್ತಿದ್ದಾರೆ. ಯಾವಾಗಲೂ ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೇ ಆಗುವುದು ಎಂದು ಗುಡುಗಿದರು.