ಮೈಸೂರು: ನನಗೆ ನನ್ನ ಮಗನಿಗೆ ಮರಿಸ್ವಾಮಿಯೇ ಅನ್ನದಾತ. ಈಗ ನಾವಿರುವ ಮನೆ ನನ್ನದಲ್ಲ, ಮರಿಸ್ವಾಮಿಯವರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನಗೆ, ನನ್ನ ಸ್ನೇಹಿತರಿಗೆ ನನ್ನ ಮಗನಿಗೆ ಬಂದಾಗ ಊಟ ಹಾಕುವುದು ಮರಿಸ್ವಾಮಿ. ಈಗ ನಾವಿರುವುದು ಮರಿಸ್ವಾಮಿಯವರ ಮನೆ. ಆತನೇ ನಮಗೆ ಅನ್ನದಾತ. ನಮ್ಮ ಹೊಸ ಮನೆ ಕನ್ ಸ್ಟ್ರಕ್ಷನ್ ನಡೆಯುತ್ತಿದೆ. ಮುಗಿದ ಮನೆ ಅಲ್ಲಿಗೆ ಹೋಗುತ್ತೇವೆ ಎಂದರು.
ಡಿಸೆಂಬರ್ ನಲ್ಲಿ ನಮ್ಮ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ. ಗೃಹ ಪ್ರವೇಶದ ಬಳಿಕ ಹೊಸ ಮನೆಗೆ ಶಿಫ್ಟ್ ಆಗುತ್ತೇವೆ. ಈ ಮನೆ ಖಾಲಿ ಇಟ್ಟರೆ ಜನರ ಭೇಟಿಗೆ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು.