BIG NEWS: ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ಸಿಎಂ ರಣತಂತ್ರ: ಉಪಚುನಾವಣೆ ಗೆದ್ದ ಖುಷಿಯಲ್ಲಿ ದೇವೇಗೌಡರ ತವರಲ್ಲೇ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶಕ್ಕೆ ಡೇಟ್ ಫಿಕ್ಸ್

ಹಾಸನ: ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದಾರೆ. ಉಪಚುನಾವಣೆ ಗೆದ್ದ ಖುಷಿಯಲ್ಲಿಯೇ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶಕ್ಕೆ ದಿನಾಂಕ ಫಿಕ್ಸ್ ಆಗಿದೆ.

ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಅಭಿಮನಿಗಳ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದೆ. 6 ಜಿಲ್ಲೆಗಳ ಬೆಂಬಲಿಗರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದೇಶನಕ್ಕೆ ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ನಿನ್ನೆ ಹಾಸನದಲ್ಲಿ ಮಾಜಿ ಶಾಸಕ ಯತೀಂದ್ರ ಹಾಗೂ ನಾಲ್ವರು ಸಚಿವರು ಸಭೆ ನಡೆಸಿ, ಸಮಾವೇಶದ ತಯಾರಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಬೋಸರಾಜು, ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಹಾಸನ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳನ್ನು ಒಗ್ಗೂಡಿಸಿ ಈ ಸಭೆ ನಡೆಸಲಾಗಿದೆ. ದೇವೇಗೌಡರ ತವರಲ್ಲೇ ಶಕ್ತಿ ಪ್ರದೇಶನ ಮಾಡಲು ಕೈ ನಾಯಕರು ಯೋಜನೆ ರೂಪಿಸಿದ್ದಾರೆ.

ಉಪಚುನಾವಣೆ ಗೆದ್ದ ಖುಷಿಯಲ್ಲಿಯೇ ಕೈ ಪಾಳಯಕ್ಕೆ ಚೈತನ್ಯ ತುಂಬಲು ಪ್ಲಾನ್ ಮಾಡಲಾಗಿದ್ದು, ಪಕ್ಷ ಹಾಗೂ ಸರ್ಕಾರ ಹೊರತುಪಡಿಸಿ ಬೆಂಬಲಿಗರ ಸಮಾವೇಶಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read