ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನವೆಂಬರ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ನವೆಂಬರ್ ನಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ ಎಂದು ಸುದ್ದಿಗಾರರು ಕೇಳುತ್ತಿದ್ದಂತೆ ಕೋಪಗೊಂಡ ಸಿಎಂ ಸಿದ್ದರಾಮಯ್ಯ, ಹಾಗಂತ ಯಾರು ಹೇಳಿದ್ದಾರೆ? ಎಲ್ಲಿ ಬಂದಿದೆ? ಎಂದರು.
ನಿಮಗೆ ಹೇಳಿದ್ದು ಯಾರು? ನನಗೆ ಗೊತ್ತಿಲ್ಲ. ಹಾಗಂತ ನಿಮಗೆ ಹೇಳಿದ್ದಾರಾ? ಯಾವ ಪತ್ರಿಕೆಯಲ್ಲಿ ಬಂದಿದೆ? ನಾನು ಎಲ್ಲಾ ಪತ್ರಿಕೆಗಳನ್ನೂ ಓದುತ್ತೇನೆ. ಎಲ್ಲಿಯೂ ಹಾಗೆ ಬಂದಿಲ್ಲ. ಎಲ್ಲಿ ಹೇಳಿದ್ದಾರೆ? ಎಲ್ಲಿ ಬಂದಿದೆ ಎಂದು ಗರಂ ಆದರು.

 
			 
		 
		 
		 
		 Loading ...
 Loading ... 
		 
		 
		