ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ಅದಿದೇವತೆ ಚಾಮುಂಡಿ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ದಸರಾ ಉದ್ಘಾಟನೆ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಘಟನೆ ನಡೆದಿದೆ. ದಸರಾ ಉದ್ಘಾಟನೆ ಬಳಿಕ ಲೇಖಕಿ ಬಾನು ಮುಷ್ತಾಕ್, ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ ಭಾಷಣ ಮಾದಿದರು. ಬಳಿಕ ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಕೆಲವರು ಎದ್ದುಹೋಗಲು ಆರಂಭವಿಸಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಕೋಪಗೊಂಡರು.
ಸಿಟ್ಟಿಗೆದ್ದ ಸಿಎಂ ಸಿದ್ದರಾಮಯ್ಯ, ಏಯ್ ಇನ್ನೂ ಸ್ವಲ್ಪಹೊತ್ತು ಕುಳಿತುಕೊಳ್ಳಲು ಆಗಲ್ವಾ ನಿಮಗೆ? ಕುಳಿತುಕೊಳ್ಳಿ ಸುಮ್ಮನೇ ಎಂದು ಗದರಿದ್ದಾರೆ. ಆದರೂ ಕೆಲವರು ಎದ್ದು ಹೋಗುತ್ತಿರುವುದನ್ನು ಕಂಡ ಸಿಎಂ, ಒಂದು ಸಲ ಹೇಳಿದರೆ ನಿಮಗ ಅರ್ಥವಾಗಲ್ವಾ? ಒಂದು ಅರ್ಧಗಂಟೆ ಕುಳಿತು ಕಾರ್ಯಕ್ರಮ ನೋಡಲು ಆಗಲ್ಲ ಅಂದಮೇಲೆ ಯಾಕೆ ಬರ್ತೀರಿ ಇಲ್ಲಿಗೆ? ಕುಳಿತುಕೊಳ್ಳಿ ಸುಮ್ಮನೆ ಎಂದು ಬೈದಾಡಿದ್ದಾರೆ. ಯಾರನ್ನೂ ಹೊರಬಿಡಬೇಡಿ ಎಂದು ವೇದಿಕೆಯಿಂದಲೇ ಪೊಲೀಸರಿಗೂ ಸೂಚನೆ ನೀಡಿದರು. ಬಳಿಕ ಭಾಷಣ ಮುಂದುವರೆಸಿದ ಪ್ರಸಂಗ ನಡೆಯಿತು,