ಮಂಡ್ಯ: ಶಿವನಸಮುದ್ರ ಬಳಿ ನಾಲೆಗೆ ಬಿದ್ದಿದ್ದ ಕಾಡಾನೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆಹಾರವನ್ನರಸಿ ಬಂದಿದ್ದ ಕಾಡಾನೆ ಮಂದ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿ ನಾಲೆಗೆ ಬಿದ್ದಿದ್ದು, ನಾಲೆಯ ನೀರಿನಿಂದ ಮೇಲೇಳೂ ಆಗದೇ, ಹೊರಬರಲೂ ಆಗದೇ ಕಳೆದ ಎರಡು ದಿನಗಳಿಂದ ಆನೆ ನೀರಿನಲ್ಲಿಯೇ ಪರದಾಡುತ್ತಿತ್ತು.
ಆನೆ ನಾಲೆಯಲ್ಲಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಇಂದು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಅರವಳಿಕೆ ಚುಚ್ಚುಮದ್ದು ನೀಡಿ ಬಳಿಕ ಕ್ರೇನ್ ಮೂಲಕ ಕಾಡಾನೆಯನ್ನು ಮೇಲಕೆತ್ತಿದ್ದಾರೆ. ಬಳಿಕ ಲಾರಿಯಲ್ಲಿ ಕಾಡಾನೆಯನ್ನು ಸ್ಥಳಾಂತರ ಮಾಡಲಾಗಿದೆ.
