ಕೊಲಂಬೊ: ಸರ್ಕಾರಿ ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 21 ಪ್ರಯಣಿಕರು ಸಾವನ್ನಪ್ಪಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ಮಧ್ಯಪ್ರಾಂತ್ಯದ ಕೋಟ್ಮಲೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು, 21 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಯಾತ್ರಾ ಸ್ಥಳವಾದ ಕತರಗಮದಿಂದ ಕುರುನಗರಕ್ಕೆ ತೆರಳುತ್ತಿತ್ತು. ಬಸ್ ನಲ್ಲಿ 75 ಪ್ರಯಾಣಿಕರಿದ್ದರು ಎಂದು ಎಂದು ತಿಳಿದುಬಂದಿದೆ.