ವಿಕೆ ಪ್ರಕಾಶ್ ನಿರ್ದೇಶನದ ಶ್ರೇಯಸ್ ಮಂಜು ನಟನೆಯ ಬಹು ನಿರೀಕ್ಷಿತ ‘ವಿಷ್ಣುಪ್ರಿಯ’ ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಕಂಪ್ಲೀಟ್ ಆಗಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ನಟ ಶ್ರೇಯಸ್ ಮಂಜು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ ಎಂದು ತಮ್ಮ instagram ಖಾತೆಯಲ್ಲಿ ತಿಳಿಸಿದ್ದಾರೆ.
ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿದ್ದು, ಅಚ್ಯುತ್ ರಾವ್, ಸುಚೀಂದ್ರ ಪ್ರಸಾದ್ , ನಿಹಾಲ್ ರಾಜ್ ಉಳಿದ ತಾರಾಂಗಣದಲ್ಲಿದ್ದಾರೆ. ಕೆ ಮಂಜು ತಮ್ಮ ಕೆ ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಸುರೇಶ್ urs ಸಂಕಲನ, ವಿನೋದ್ ಭಾರತಿ ಛಾಯಾಗ್ರಹಣ, ಹಾಗೂ ವಿಕ್ರಮ್ ಪಿ , ವಿನೋದ್ ಅವರ ಸಾಹಸ ನಿರ್ದೇಶನವಿದೆ. ಗೋಪಿ ಸುಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
,