ಮಗನ 2ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಸೋಮವಾರ ತಮ್ಮ ಪುತ್ರ ದೇವಯಾನ್ ನ ಎರಡನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಗನ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ನನ್ನ ಪುಟ್ಟ ಮಗು ! ಸಮಯವು ತುಂಬಾ ವೇಗವಾಗಿ ಓಡುತ್ತಿದೆ. ನಿನಗೆ ಈಗಾಗಲೇ 2 ವರ್ಷ. ನಿನ್ನನ್ನು ಪಡೆದಿದ್ದಾಗಿ ತುಂಬಾ ಹೆಮ್ಮೆಪಡುವ ನಿಮ್ಮ ತಂದೆ – ತಾಯಿಗೆ ಈ ದಿನ ಜನ್ಮ ನೀಡಿದ್ದಕ್ಕಾಗಿ ಧನ್ಯವಾದಗಳು. ನಿನ್ನ ಚೇಷ್ಟೆಯ, ಮುದ್ದಾದ ನಗು, ಮುಗ್ಧ ಮಾತು ನಮ್ಮ ಜೀವನದಲ್ಲಿ ಪ್ರೀತಿ ಮತ್ತು ಕೃತಜ್ಞತೆಯನ್ನು ತುಂಬಿವೆ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ದೇವಯಾನ್.” ಎಂದು ಶ್ರೇಯಾ ತನ್ನ ಮಗ ಮತ್ತು ಅವರ ಪತಿ ಶಿಲಾದಿತ್ಯ ಅವರೊಂದಿಗೆ ಪೋಸ್ ನೀಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಗೆ ನಟಿಯರಾದ ಬಿಪಾಶಾ ಬಸು, ಸಮೀರಾ ರೆಡ್ಡಿ, ಗಾಯಕಿ ಹರ್ಷದೀಪ್ ಕೌರ್ ಸೇರಿದಂತೆ ಸೆಲಬ್ರಿಟಿಗಳಿಂದ ಹಿಡಿದು ನೆಟ್ಟಿಗರು ಶುಭಾಶಯ ಕೋರಿದ್ದಾರೆ.

ಫೆಬ್ರವರಿ 5, 2015 ರಂದು ಖಾಸಗಿ ಸಮಾರಂಭದಲ್ಲಿ ಶ್ರೇಯಾ ತನ್ನ ಬಹುಕಾಲದ ಗೆಳೆಯ ಶಿಲಾದಿತ್ಯ ಅವರೊಂದಿಗೆ ಮದುವೆಯಾದರು. ದಂಪತಿ ಮೇ 22, 2021 ರಂದು ತಮ್ಮ ಗಂಡು ಮಗು ದೇವಯಾನ್‌ ನನ್ನು ಪಡೆದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read