
2007 ರಲ್ಲಿ ‘ಚೆಲುವಿನ ಚಿತ್ತಾರ’ದ ದೊಡ್ಡ ಗೆಲುವಿನ ಬಳಿಕ ಮತ್ತೆ ತೆರೆಮೇಲೆ ಒಂದಾದ ಗಣೇಶ್ ಮತ್ತು ಅಮೂಲ್ಯ ಜೋಡಿ 2013 ರಲ್ಲಿ ʼಶ್ರಾವಣಿ ಸುಬ್ರಹ್ಮಣ್ಯʼ ಚಿತ್ರದಲ್ಲಿ ನಟಿಸಿ ಯಶಸ್ಸು ಕಂಡಿದ್ರು. ಬಾಕ್ಸಾಫೀಸ್ ನಲ್ಲೂ ಸಖತ್ ಸದ್ದು ಮಾಡಿದ ಈ ಚಿತ್ರ ಇದೀಗ 10 ವರ್ಷ ಪೂರೈಸಿದ್ದು, ಇದೇ ಸಂಭ್ರಮದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಸೀಕ್ವೆಲ್ ಬರಲಿದೆ ಎಂದು ನಿರ್ಮಾಪಕ ಸುರೇಶ್ ತಿಳಿಸಿದ್ದಾರೆ.
ನಿರ್ಮಾಪಕ ಸುರೇಶ್ ಒನ್ಸ್ ಮೋರ್ ಶ್ರಾವಣಿ ಸುಬ್ರಹ್ಮಣ್ಯ ಎಂದು ಘೋಷಿಸಿದ್ದಾರೆ. ಆದರೆ ಉಳಿದ ವಿವರಗಳನ್ನು ತಂಡವು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ ಎಂದಿದ್ದಾರೆ. ಸದ್ಯ ಆಡಿಷನ್ ಕರೆದಿರುವ ಚಿತ್ರತಂಡ ಹೊಸ ಕಲಾವಿದರನ್ನು ಆಯ್ಕೆ ಮಾಡಲಿದೆ. ಚಿತ್ರದ ಕಥಾವಸ್ತುವನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು. ಕಥೆ ಹಾಸ್ಯ ಮತ್ತು ಪ್ರಣಯ ಅಂಶಗಳಿಂದ ತುಂಬಿರುತ್ತದೆ ಎಂದಿದ್ದಾರೆ.
ಮಂಜು ಸ್ವರಾಜ್ ನಿರ್ದೇಶನದ ಶ್ರಾವಣಿ ಸುಬ್ರಹ್ಮಣ್ಯ ಮೈಸೂರು ಸುತ್ತಮುತ್ತ ಚಿತ್ರೀಕರಣಗೊಂಡಿತ್ತು. ʼಚೆಲುವಿನ ಚಿತ್ತಾರʼ ದ ನಂತರ ಗಣೇಶ್‌ಗೆ ಮತ್ತೊಂದು ದೊಡ್ಡ ಬ್ರೇಕ್ ಸಿಕ್ಕಿತು. ಚೆಲುವಿನ ಚಿತ್ತಾರ ಬಳಿಕ ಅಷ್ಟೇನೂ ಯಶಸ್ಸು ಕಾಣದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಗಣೇಶ್ ಗೆ ʼಶ್ರಾವಣಿ ಸುಬ್ರಹ್ಮಣ್ಯʼ ಮತ್ತೆ ಯಶಸ್ಸು ಕೊಟ್ಟಿತ್ತು. ವರದಿಯ ಪ್ರಕಾರ ಚಿತ್ರ 2013 ರಲ್ಲಿ ಸುಮಾರು 30 ಕೋಟಿ ರೂ. ಗಳಿಸಿತ್ತು.

 
			 
		 
		 
		 
		 Loading ...
 Loading ... 
		 
		