ರಾತ್ರಿ ನೀರು ಕುಡಿಯಬೇಕೋ ? ಬೇಡವೋ ? ತಜ್ಞರು ಕೊಡುವ ಸಲಹೆ ಏನು ಗೊತ್ತಾ……?

ನೀರು ದೇಹಕ್ಕೆ ಬಹಳ ಮುಖ್ಯ. ನೀರನ್ನು ಕಡಿಮೆ ಕುಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ರಾತ್ರಿಯಲ್ಲಿ ನೀರು ಕುಡಿಯಬೇಕೋ ಬೇಡವೋ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ರಾತ್ರಿ ನೀರು ಕುಡಿಯುವುದು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ  ಎಂಬುದನ್ನು ತಿಳಿದುಕೊಳ್ಳಬೇಕು.

ರಾತ್ರಿ ಮಲಗುವ ಮುನ್ನ ನೀರು ಕುಡಿಯಬೇಕು ಎಂಬುದು ತಜ್ಞರ ಅಭಿಪ್ರಾಯ. ಯಾಕೆಂದರೆ ಇದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ರಾತ್ರಿಯಲ್ಲಿ ನೀರು ಕುಡಿಯುವುದರಿಂದ, ಚಯಾಪಚಯ ಕ್ರಿಯೆ ಸುಲಭವಾಗುತ್ತದೆ. ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ತೊಂದರೆಯಾಗುವುದಿಲ್ಲ. ರಾತ್ರಿ ನೀರನ್ನು ಕುಡಿಯುವ ಬದಲು ಗ್ರೀನ್ ಟೀ, ಹರ್ಬಲ್ ಟೀ ಅಥವಾ ನಿಂಬೆ ಪಾನಕ ಸೇವಿಸಿದರೆ ಇನ್ನೂ ಒಳ್ಳೆಯದು.

ಯಾಕಂದ್ರೆ ಬರಿಯ ನೀರು ಕುಡಿದರೆ ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ರಾತ್ರಿ ಊಟದ ನಂತರ ನೀರು ಕುಡಿಯುವುದರಿಂದ ದೇಹ ಆಂತರಿಕವಾಗಿ ಸ್ವಚ್ಛವಾಗುತ್ತದೆ. ವಿಷಕಾರಿ ಪದಾರ್ಥಗಳು ಹೊರಹೋಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಸಿಡಿಟಿ ಅಥವಾ ಗ್ಯಾಸ್ ಸಮಸ್ಯೆ ಇರುವವರು ರಾತ್ರಿ ನೀರು ಕುಡಿಯಬೇಕು.

ಶೀತದ ಸಮಸ್ಯೆ ಇರುವವರು ಕೂಡ ರಾತ್ರಿ ನೀರು ಕುಡಿಯುವುದು ಉತ್ತಮ. ಮಧುಮೇಹ ಮತ್ತು ಹೃದಯದ ತೊಂದರೆ ಇರುವವರು ರಾತ್ರಿ ಹೆಚ್ಚು ನೀರು ಕುಡಿಯಬಾರದು. ಈ ಸಮಸ್ಯೆ ಇರುವವರು ರಾತ್ರಿ ಹೆಚ್ಚು ನೀರು ಕುಡಿದರೆ  ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ, ಇದರಿಂದ ನಿದ್ದೆಗೆ ತೊಂದರೆಯಾಗುತ್ತದೆ. ಯಾಕೆಂದರೆ ಉತ್ತಮ ಆರೋಗ್ಯಕ್ಕೆ 8 ಗಂಟೆಗಳ ನಿದ್ದೆ ಅತ್ಯಂತ ಅವಶ್ಯಕ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read