ಸಂಬಳ ಹೆಚ್ಚಾಗಬೇಕಾ….? ಹಾಗಾದ್ರೆ ಫಾಲೋ ಮಾಡಿ ಈ ಟಿಪ್ಸ್

ಅಗತ್ಯ ವಸ್ತುಗಳೆಲ್ಲಾ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಎಷ್ಟೆಲ್ಲಾ ದುಡಿದರೂ ತಿಂಗಳ ಕೊನೆಗೆ ಕೈಯಲ್ಲಿ ಕಾಸೇ ಉಳಿಯಲ್ಲ.

ದಿನವಿಡೀ ದುಡಿದರೂ ಬರುವ ಅಲ್ಪಸ್ವಲ್ಪ ಸಂಬಳ ಸಾಕಾಗಲ್ಲ. ಬರುತ್ತಿರುವ ವೇತನದಲ್ಲಿ ರೇಷನ್, ಬಾಡಿಗೆ, ಕರೆಂಟ್ ಬಿಲ್, ಹಾಲು, ಪೇಪರ್, ಕೇಬಲ್, ಫೋನ್ ಬಿಲ್, ಪಾಲಿಸಿ ಹೀಗೆ ಬಂದ ಹಣವನ್ನೆಲ್ಲಾ ಖಾಲಿ ಮಾಡಿಕೊಂಡು ಕೊರಗುವುದನ್ನು ಹೆಚ್ಚಿನವರ ಮಾತಿನಲ್ಲಿ ಕಾಣಬಹುದು.

ಕೈ ತುಂಬ ಸಂಬಳ ಸಿಕ್ಕವರಿಗೆ ಹಣದ ತೊಂದರೆ ಕಾಣಲ್ಲ. ಆದರೆ, ಅಲ್ಪ ಹಣದಲ್ಲಿ ತಿಂಗಳಿಡಿ ಮೆಂಟೇನ್ ಮಾಡುವುದು ಇದೆಯಲ್ಲ ಅದು ಕಷ್ಟದ ಕೆಲಸ.

ಕೆಲವರು ತಾವು ಮಾಡಿದ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ ಎಂದು ಹೇಳುವುದನ್ನು ಕೇಳಿರುತ್ತೀರಿ. ಮಾಡಿದ ಕೆಲಸಕ್ಕೆ ತಕ್ಕಂತೆ ಮಾಲೀಕರು, ಕಂಪನಿ ವೇತನ ಕೊಡುತ್ತದೆ.

ನೀವು ದಿನವಿಡೀ ದುಡಿದರೂ, ನಿಮ್ಮನ್ನು ಗಮನಿಸುವ ಮೇಲ್ವಿಚಾರಕರ ಗಮನಕ್ಕೆ ಬರುವುದಿಲ್ಲ. ನಿಮ್ಮ ಕೆಲಸ ಸ್ಮಾರ್ಟ್ ಆಗಿರಲಿ. ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮುಗಿಸಿ.

ಕೆಲಸ ಪೂರ್ಣಗೊಳಿಸಲು ನಿಮಗೆ ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಮುಗಿಸಿ, ನೀವು ಸಲ್ಲಿಸಿದ ಸೇವೆ, ಕೆಲಸಗಳು ನೀವು ಕೆಲಸ ಮಾಡುವ ಸ್ಥಳದಲ್ಲಿ ಪ್ರಭಾವ ಬೀರುವಂತೆ ಇರಬೇಕು.

ಕಂಪನಿ ನಿಮ್ಮ ಕೆಲಸ ಗುರುತಿಸಲು ಶ್ರಮ ಮುಖ್ಯ. ಜೊತೆಗೆ ನಿಮ್ಮ ವ್ಯಕ್ತಿತ್ವವೂ ಕಾರಣವಾಗುತ್ತದೆ. ಉತ್ತಮ ಕೆಲಸಗಾರ ಎಂದೆನಿಸಿಕೊಳ್ಳಬೇಕು.

ನಿಮ್ಮಿಂದ ಇಂತಹ ಕೆಲಸವಾಯ್ತು. ಅದರಿಂದ ಅನುಕೂಲವಾಯ್ತು ಎಂದು ಬಾಸ್, ಮೇಲ್ವಿಚಾರಕರು, ಕಂಪನಿ ಹೇಳುವಂತಾಗಬೇಕು. ಆಗ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ವೇತನ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸದ ಮೇಲೆ ನಿಮ್ಮ ವೇತನ ನಿರ್ಧಾರವಾಗುತ್ತದೆ ಎನ್ನುತ್ತಾರೆ ತಿಳಿದವರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read