ಬೆಳ್ಳಗಾಗಬೇಕಾ…..? ಇಲ್ಲಿದೆ ಸುಲಭ ʼಉಪಾಯʼ

ಬೆಳ್ಳಗಿರಬೇಕೆನ್ನುವುದು ಎಲ್ಲರ ಕನಸು. ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರ್ತಾರೆ. ಆದ್ರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.

ಕಡಲೆ-ಅರಿಶಿನದ ಮಿಶ್ರಣ: ಕಡಲೆ ಹಿಟ್ಟು-ಅರಿಶಿನ ಹಾಗೂ ಶ್ರೀಗಂಧದ ಪುಡಿಯನ್ನು ಸೇರಿಸಿ,ಅದಕ್ಕೆ ಸ್ವಲ್ಪ ರೋಜ್ ವಾಟರ್ ಮಿಶ್ರಣ ಮಾಡಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ನಂತ್ರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಜೊತೆ ಕೈ ಕಾಲು, ಕುತ್ತಿಗೆಗೂ ಇದನ್ನು ಹಚ್ಚಿಕೊಳ್ಳಿ. ಮಿಶ್ರಣ ಅರ್ಧ ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಎಳ್ಳಿನ ಪ್ಯಾಕ್ : ಎಳ್ಳನ್ನು ಹಾಲು ಅಥವಾ ನೀರಿನಲ್ಲಿ ರಾತ್ರಿ ಪೂರ್ತಿ ನೆನೆಸಿಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಮಿಕ್ಸಿ ಮಾಡಿಕೊಂಡು ಪೂರ್ತಿ ದೇಹಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೆ ಚಳಿಗಾಲದಲ್ಲಿ ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಹಾಲು ಹಾಗೂ ಕಡಲೆ ಹಿಟ್ಟಿನ ಮಿಶ್ರಣ : ಬಿಸಿ ಮಾಡದ ಹಾಲು ಹಾಗೂ ಕಡಲೆ ಹಿಟ್ಟಿನ ಮಿಶ್ರಣವನ್ನು ಸಿದ್ಧಪಡಿಸಿಕೊಂಡು ಇಡೀ ದೇಹಕ್ಕೆ ಹಚ್ಚಿಕೊಳ್ಳಿ. ಇದು ಚರ್ಮ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಬೇವು ಹಾಗೂ ತುಳಸಿ : ಬೇವಿನ ಎಲೆ ಹಾಗೂ ತುಳಸಿ ಎಲೆಯನ್ನು ರುಬ್ಬಿ ಮಿಶ್ರಣ ತಯಾರಿಸಿಕೊಳ್ಳಿ. ಅದನ್ನು ದೇಹಕ್ಕೆ ಹಚ್ಚಿಕೊಳ್ಳಿ. ಇದರಲ್ಲಿ ಸಾಕಷ್ಟು ಔಷಧಿ ಗುಣವಿದ್ದು, ಎಂಟಿಬಯೋಟಿಕ್ ರೂಪದಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read