ವರ್ಷಾಂತ್ಯದಲ್ಲಿ ಅಂಡರ್​ ವಾಟರ್​ ಮೆಟ್ರೊ ಕಾರ್ಯಾರಂಭ: ಕೋಲ್ಕತಾ ಮುಡಿಗೆ ಇನ್ನೊಂದು ಗರಿ

ಕೋಲ್ಕತಾ: 8000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತದ ಮೊದಲ ನೀರೊಳಗಿನ ಮೆಟ್ರೋ (ಅಂಡರ್​ವಾಟರ್​ ಮೆಟ್ರೊ) 2023 ರ ವೇಳೆಗೆ ಕೋಲ್ಕತಾದಲ್ಲಿ ಕಾರ್ಯಾರಂಭ ಮಾಡಲಿದೆ.

ಕೋಲ್ಕತಾ ಮೆಟ್ರೋ ರೈಲು ಕಾರ್ಪೊರೇಷನ್ (KMRC) ಕೋಲ್ಕತಾ ನಗರದಲ್ಲಿ ನೀರೊಳಗಿನ ಮೆಟ್ರೋವನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಈ ಮೆಟ್ರೋ ಹೂಗ್ಲಿ ನದಿಯ ಮೂಲಕ ಹಾದು ಹೋಗುತ್ತದೆ ಮತ್ತು ಹೌರಾ ಮತ್ತು ಕೋಲ್ಕತಾವನ್ನು ಸಂಪರ್ಕಿಸುತ್ತದೆ. ಯೋಜನೆಯು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಚಾಲ್ತಿಯಲ್ಲಿರುವ ನೀರೊಳಗಿನ ಸುರಂಗ ಯೋಜನೆಯು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕೆಲವು ಪುನರ್ವಸತಿ ಕಾರ್ಯಗಳು ಪ್ರಕ್ರಿಯೆಯಲ್ಲಿವೆ ಮತ್ತು ಇತರ ಸಮಸ್ಯೆಗಳು ನೀರೊಳಗಿನ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿವೆ ಎಂದು ಸಿವಿಲ್ ಕೆಎಂಆರ್‌ಸಿ ಜನರಲ್ ಮ್ಯಾನೇಜರ್ ಶೈಲೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಿದೇಶಿ ತಜ್ಞರು ನಮ್ಮ ಜೊತೆಗಿದ್ದಾರೆ. ಪ್ರಸ್ತುತ ನಾವು ಕಷ್ಟಕರವಾದ ಕೆಲಸವನ್ನು ಸುಲಭಗೊಳಿಸಲು ವಿದೇಶದಿಂದ (ಜರ್ಮನ್) ಯಂತ್ರಗಳನ್ನು ಬಳಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read