‘ಶೋಲೆ’ ಸ್ಟಾರ್‌ಗಳ ಸಂಭಾವನೆ ಬಹಿರಂಗ : ಅಂದಿನ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಿ !

ಬೆಳ್ಳಿತೆರೆಯ ಮೇಲಿನ ಅಜರಾಮರ ಕಾವ್ಯ ‘ಶೋಲೆ’. ದಶಕಗಳು ಉರುಳಿದರೂ ಇದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ರಮೇಶ್ ಸಿಪ್ಪಿ ನಿರ್ದೇಶನದ ಈ ಆಕ್ಷನ್-ಡ್ರಾಮಾ ಚಿತ್ರದಲ್ಲಿ ಧರ್ಮೇಂದ್ರ, ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ಜಯಾ ಬಚ್ಚನ್, ಸಂಜೀವ್ ಕುಮಾರ್ ಮತ್ತು ಅಮ್ಜದ್ ಖಾನ್ ಅವರಂತಹ ದಿಗ್ಗಜ ತಾರೆಯರು ನಟಿಸಿದ್ದಾರೆ.

ಜೈ-ವೀರ‍ು ಅವರ ಗೆಳೆತನ, ಬಸಂತಿಯ ದಿಟ್ಟತನ, ಗಬ್ಬರ್ ಸಿಂಗ್‌ನ ಭಯಾನಕ ಪಾತ್ರ – ಇವೆಲ್ಲವೂ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಇಂದಿನ ದಿನಗಳಲ್ಲಿ ಕಲಾವಿದರು ಒಂದೇ ಹಾಡಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಅಂದಿನ ಕಾಲದ ಈ ಸೂಪರ್‌ಸ್ಟಾರ್‌ಗಳ ಸಂಭಾವನೆ ಎಷ್ಟಿತ್ತು ಎಂದು ತಿಳಿದರೆ ನೀವು ಅಚ್ಚರಿಪಡಬಹುದು!

ವರದಿಗಳ ಪ್ರಕಾರ, ‘ಶೋಲೆ’ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಧರ್ಮೇಂದ್ರ. ಅವರಿಗೆ ಸುಮಾರು 1.5 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು. ನಂತರದ ಸ್ಥಾನದಲ್ಲಿ ಠಾಕೂರ್ ಪಾತ್ರದಲ್ಲಿ ಮಿಂಚಿದ ಸಂಜೀವ್ ಕುಮಾರ್ ಇದ್ದರು. ಅವರ ಸಂಭಾವನೆ 1.25 ಲಕ್ಷ ರೂಪಾಯಿ. ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್‌ಗೆ ಸಿಕ್ಕ ಸಂಭಾವನೆ ಸುಮಾರು 1 ಲಕ್ಷ ರೂಪಾಯಿಗಳು. ಇನ್ನು ಗಬ್ಬರ್ ಸಿಂಗ್ ಪಾತ್ರದ ಮೂಲಕ ಮನೆಮಾತಾದ ಅಮ್ಜದ್ ಖಾನ್ ಅವರಿಗೆ ಕೇವಲ 50,000 ರೂಪಾಯಿಗಳನ್ನು ನೀಡಲಾಗಿತ್ತು.

ಆ ಕಾಲದಲ್ಲೂ ಲಿಂಗ ತಾರತಮ್ಯ ಎದ್ದು ಕಾಣುತ್ತಿತ್ತು. ಚಿತ್ರದ ಪ್ರಮುಖ ನಾಯಕಿಯರಾದ ಹೇಮಾ ಮಾಲಿನಿ ಮತ್ತು ಜಯಾ ಬಚ್ಚನ್ ಅವರಿಗೆ ಅವರ ಸಹ ನಟರಿಗಿಂತ ಕಡಿಮೆ ಸಂಭಾವನೆ ನೀಡಲಾಗಿತ್ತು. ಬಸಂತಿ ಪಾತ್ರದಲ್ಲಿ ಅಭಿನಯಿಸಿದ ಹೇಮಾ ಮಾಲಿನಿ ಅವರಿಗೆ 75,000 ರೂಪಾಯಿ ಹಾಗೂ ಜಯಾ ಬಚ್ಚನ್ (ಆಗ ಜಯಾ ಭಾದುರಿ) ಅವರಿಗೆ ಕೇವಲ 35,000 ರೂಪಾಯಿ ಸಂಭಾವನೆ ನೀಡಲಾಗಿತ್ತು. ಹಾಸ್ಯ ಪಾತ್ರದಲ್ಲಿ ಗಮನ ಸೆಳೆದ ಗೋವರ್ಧನ್ ಅಸ್ರಾನಿ ಅವರ ಗಳಿಕೆ 15,000 ರೂಪಾಯಿಗಳು.

ಸುಮಾರು 3 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾದ ‘ಶೋಲೆ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿತು. ಇದರ ನಿವ್ವಳ ಗಳಿಕೆ 15 ಕೋಟಿ ರೂಪಾಯಿಗಳಾಗಿದ್ದು, ವಿಶ್ವಾದ್ಯಂತ 50 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತು. ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದರೂ, ನಂತರ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿ ಅನೇಕ ದಾಖಲೆಗಳನ್ನು ಮುರಿಯಿತು. ಮುಂಬೈನ ಮಿನರ್ವಾ ಚಿತ್ರಮಂದಿರದಲ್ಲಿ ಸತತ ಐದು ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡು ಇತಿಹಾಸವನ್ನೇ ಸೃಷ್ಟಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read