ಗುರುಗ್ರಾಮದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಲಿವ್ ಇನ್ ಸಂಬಂಧದಲ್ಲಿದ್ದ ವ್ಯಕ್ತಿಯನ್ನೇ ಯುವತಿ ಇರಿದು ಕೊಂದಿದ್ದಾಳೆ. ಗುರುಗ್ರಾಮದ ಬಲಿಯಾವಾಸ್ ನಿವಾಸಿ 42 ವರ್ಷದ ಹರೀಶ್ ಮೃತ ವ್ಯಕ್ತಿ. ದೆಹಲಿಯ ಅಶೋಕ್ ವಿಹಾರ್ನ 27 ವರ್ಷದ ಯಶ್ಮೀತ್ ಕೌರ್ ಈ ಕೃತ್ಯ ಎಸಗಿದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ವಾಸಿಸುತ್ತಿದ್ದ ಜೋಡಿಗಳ ನಡುವೆ ಮನಸ್ತಾಪ ಬಂದು ಈ ಘಟನೆ ನಡೆದಿದೆ. ಯಶ್ಮೀತ್ ಕೌರ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಹರೀಶ್ ತನ್ನ ಪತ್ನಿ ಮತ್ತು ಕುಟುಂಬವನ್ನು ಭೇಟಿಯಾಗುತ್ತಿದ್ದನು. ಇದರಿಂದ ಹರೀಶ್ ಹಾಗೂ ಯಶ್ಮೀತ್ ಕೌರ್ ನಡುವೆ ಜಗಳ ನಡೆಯುತ್ತಿತ್ತು. ಹಾಗೆಯೇ ಒಂದು ದಿನ ಜಗಳ ತಾರಕಕ್ಕೇರಿದ್ದು, ರೊಚ್ಚಿಗೆದ್ದ ಯಶ್ಮೀತ್ ಕೌರ್ ಹರೀಶ್ ಗೆ ಚಾಕು ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಹರೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೃತನ ಸ್ನೇಹಿತ ವಿಜಯ್ ಅಲಿಯಾಸ್ ಸೇಥಿ ಕೂಡ ತನಿಖೆಯಲ್ಲಿದ್ದಾನೆ, ಈತ ಇನ್ನೊಂದು ಕೋಣೆಯಲ್ಲಿದ್ದನೆಂದು ವರದಿಯಾಗಿದೆ. ಏತನ್ಮಧ್ಯೆ, ಕೌರ್ ಮತ್ತು ವಿಜಯ್ ಇಬ್ಬರೂ ಕೊಲೆಯನ್ನು ಯೋಜಿಸಿದ್ದಾರೆ ಎಂದು ಹರೀಶ್ ಸೋದರಳಿಯ ಆರೋಪಿಸಿದ್ದಾರೆ.