ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಇದು ಮತ್ತೊಮ್ಮೆ ಮಾನವೀಯತೆಯನ್ನು ಪ್ರಶ್ನಿಸಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಕೋಲಿನಿಂದ ಥಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಮಹಿಳೆಯ ಮೇಲೆ ಕ್ರೂರ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಂಚೋರ್ ಜಿಲ್ಲೆಯ ಪೊಲೀಸರು ಘೋಷಿಸಿದ್ದಾರೆ.
ಶಂಕಿತರನ್ನು ಮಂಗಳರಾಮ್ ಮತ್ತು ಹಿರಾಮ್ ಎಂದು ಗುರುತಿಸಲಾಗಿದ್ದು, ಅವರು ಸಂತ್ರಸ್ತೆಯ ಸಂಬಂಧಿಕರು ಎಂದು ವರದಿಯಾಗಿದೆ.
ಸಂತ್ರಸ್ತೆಯ ದೂರಿನ ನಂತರ, ತಕ್ಷಣವೇ ಪ್ರಕರಣ ದಾಖಲಾಗಿದ್ದು, ಮಂಗಳರಾಮ್ ಮತ್ತು ಹಿರಾಮ್ ಎಂಬುವರನ್ನು ಬಂಧಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
“मैं निराश और भयभीत हूँ !” 😞
इसे देख कर यदि आपको गुस्सा नहीं आ रहा है तो आप जिन्दा लाश हो 🤬🤬🤬🤬
रीट्वीट करना आपका काम है 🙏🙏🙏🙏 pic.twitter.com/oJBqC3N7ur
— Santosh Rathore (@press_santoshR) August 30, 2024