SHOCKING : ಹೈವೋಲ್ಟೇಜ್ ಟ್ರಾನ್ಸ್ಫಾರ್ಮರ್ ನಲ್ಲಿ ನೇತಾಡಿದ ಮಹಿಳೆ : 800 ಕ್ಕೂ ಹೆಚ್ಚು ಮನೆಗಳಿಗೆ ಪವರ್ ಕಟ್| Video

ಉತಾಹ್: ಸಾಲ್ಟ್ ಲೇಕ್ ಸಿಟಿಯಲ್ಲಿ ಮಹಿಳೆಯೊಬ್ಬರು ಹೈ ವೋಲ್ಟೇಜ್ ಟ್ರಾನ್ಸ್ ಫಾರ್ಮರ್ ಹತ್ತಿದ ವಿಲಕ್ಷಣ ಘಟನೆ ನಡೆದಿದ್ದು, ಘಟನೆ ಬಳಿಕ ನಂತರ ಉತಾಹ್ ನಲ್ಲಿ 800 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತವಾಗಿದೆ.

ಹೌದು, ಸೋಷಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಕೆಂಪು ಸ್ಕರ್ಟ್, ಕಪ್ಪು ಬಟ್ಟೆ ಹಾಕಿಕೊಂಡು ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೇರಿ ಕುಳಿತು ಹುಚ್ಚಾಟ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಟ್ರಾನ್ಸ್ ಫಾರ್ಮರ್ ಏರಿದ ಮಹಿಳೆಯನ್ನು ತಡೆಯಲು ಪೊಲೀಸರು ಹೆಣಗಾಡುತ್ತಿದ್ದಾರೆ. ಯುವತಿ ಟ್ರಾನ್ಸ್ ಫಾರ್ಮರ್ ಬಳಿ ಹೋಗುತ್ತಿದ್ದಂತೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. ಮಾನಸಿಕ ಅಸ್ವಸ್ಥ ಮಹಿಳೆ ಹುಚ್ಚಾಟ ಈ ಹುಚ್ಚಾಟ ನಡೆಸಿದ್ದಾಳೆ.

ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ನೆರೆದಿದ್ದರು. ಕೆಳಗೆ ಇಳಿಯದಿದ್ದರೆ ಶೂಟ್ ಮಾಡುತ್ತೇವೆ ಎಂಬ ಪೊಲೀಸರ ಬೆದರಿಕೆಗೆ ಕ್ಯಾರೇ ಎನ್ನದ ಮಹಿಳೆ ತನ್ನ ಹುಚ್ಚಾಟ ಮುಂದುವರೆಸಿದ್ದಾಳೆ. ಕೊನೆಗೆ ಲೆಸ್ ಲೆಥಲ್ ಗನ್ನಿಂದ ಅನಿವಾರ್ಯವಾಗಿ ಶೂಟ್ ಮಾಡಿದ್ದಾರೆ. ಬಳಿಕ ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read