ಬೀದರ್: ಬೀದರ್ ಜಿಲ್ಲೆ ನಾಗೂರು ಗ್ರಾಮದಲ್ಲಿ ತೋಳದ ದಾಳಿಯಿಂದಾಗಿ ಮೂವರು ರೈತರು ಗಾಯಗೊಂಡಿದ್ದಾರೆ.
ಬೀದರ್ ಜಿಲ್ಲೆ ಔರಾದ್ ತಾಲೂಕಿನ ನಾಗೂರು ಗ್ರಾಮದಲ್ಲಿ ರೈತರ ಮೇಲೆ ತೋಳ ದಾಳಿ ನಡೆಸಿದೆ. ರಮೇಶ ಧನಗಾರ ಸೇರಿ ಮೂವರ ಮೇಲೆ ತೋಳ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಹೊಲದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಏಕಾಏಕಿ ತೋಳ ದಾಳಿ ಮಾಡಿದೆ ಎನ್ನಲಾಗಿದೆ. ಗಾಯಗೊಂಡ ಮೂವರನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

 
			 
		 
		 
		 
		 Loading ...
 Loading ... 
		 
		 
		