ಲೋಡೆಡ್​ ಗನ್​ ಹಿಡಿದು ಅಡ್ಡಾಡಿದ ಪುಟ್ಟ ಮಗು: ತಂದೆ ಅರೆಸ್ಟ್ ​- ಭಯಾನಕ ವಿಡಿಯೋ ವೈರಲ್

ಪುಟ್ಟ ಮಗುವೊಂದು ಕೈಯಲ್ಲಿ ಲೋಡೆಡ್​ ಗನ್​ ಹಿಡಿದುಕೊಂಡಿರುವ ಆಘಾತಕಾರಿ ವಿಡಿಯೋ ಒಂದು ವೈರಲ್​ ಆಗಿದೆ. ಅಪಾರ್ಟ್ಮೆಂಟ್ ಕಟ್ಟಡದ ಹಜಾರದಲ್ಲಿ ಲೋಡ್ ಮಾಡಿದ ಹ್ಯಾಂಡ್‌ಗನ್‌ನೊಂದಿಗೆ ಡೈಪರ್ ಧರಿಸಿದ ಮಗು ಓಡಾಡುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಮಗು ಬಂದೂಕನ್ನು ತೋರಿಸಿ ಟ್ರಿಗರ್ ಎಳೆಯುವುದನ್ನು ಸಹ ನೋಡಬಹುದು.

ಶಾನನ್ ವಾಟ್ಸ್ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ ಮತ್ತು ಈ ಭಯಾನಕ ಘಟನೆಯ ಬಗ್ಗೆ ಬರೆದಿದ್ದಾರೆ. ಅಕ್ಕಪಕ್ಕದ ಮನೆಯವರು ಗನ್ ಹಿಡಿದಿದ್ದನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಪುಟ್ಟ ಬಾಲಕನಿಗೆ ಯಾವುದೇ ಹಾನಿಯಾಗದಿದ್ದರೂ, ಮಗುವಿನ ತಂದೆ ಈಗ ಬಂಧನಕ್ಕೊಳಗಾಗಿದ್ದಾನೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಅಪಾರ್ಟ್‌ಮೆಂಟ್ ಕಟ್ಟಡದ ಪಡಸಾಲೆಯಲ್ಲಿ ಮಗು ಗನ್ ಹಿಡಿದುಕೊಂಡು ಆಟವಾಡುತ್ತಿರುವುದನ್ನು ಕಾಣಬಹುದು. ಭಯಗೊಂಡ ನೆರೆಹೊರೆಯವರು ಕರೆ ಮಾಡಿದ ನಂತರ ಪೊಲೀಸರು ಸ್ಥಳಕ್ಕೆ ಬಂದರು. ಮಗುವಿನೊಂದಿಗೆ ಆತನ ಮನೆಗೆ ಆಗಮಿಸಿದ ನಂತರ ಪೊಲೀಸರು ಪರಿಶೀಲನೆ ನಡೆಸಿದರು. ಮಗುವಿನ ನಿರ್ಲಕ್ಷ್ಯದ ಆರೋಪವನ್ನು ತಂದೆಗೆ ವಿಧಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

https://twitter.com/shannonrwatts/status/1614727097616072706?ref_src=twsrc%5Etfw%7Ctwcamp%5Etweetembed%7Ct

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read