ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ನಾಯಿಯೊಂದನ್ನು ಬೈಕಿಗೆ ಕಟ್ಟಿಕೊಂಡು ಅದನ್ನು ಒಂದು ಕಿಮೀ ದೂರ ಎಳೆದೊಯ್ದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ. ಭಾನುವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ.
ಇಲ್ಲಿನ ಪ್ರತಾಪ್ ವಿಹಾರದಲ್ಲಿ ಈ ಅಮಾನುಷ ಘಟನೆ ಸಂಭವಿಸಿದ್ದು, ಪ್ರತ್ಯಕ್ಷದರ್ಶಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಸುರ್ಭಿ ರಾವತ್ ಹಾಗೂ ಪತ್ರಕರ್ತ ಸುನೀಲ್ ಗೌತಮ್ ಈ ವಿಡಿಯೋ ಶೇರ್ ಮಾಡಿದ್ದಾರೆ.
ಈ ನಿರ್ದಯಿ ಮನುಷ್ಯನಿಂದ ನಾಯಿಯನ್ನು ರಕ್ಷಿಸಲು ಮುಂದಾದ ಸುತ್ತಲಿನ ಜನತೆ, ನಾಯಿಯನ್ನು ಬೈಕ್‌ನಿಂದ ಬಿಡಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಐಪಿಸಿಯ 429ನೇ ವಿಧಿ (ಜಾನುವಾರುಗಳಿಗೆ ಚಿತ್ರಹಿಂಸೆ ಕೊಡುವುದು ಅಥವಾ ಕೊಲ್ಲುವುದು) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಯಿಯನ್ನು ವೈದ್ಯಕೀಯ ಶುಶ್ರೂಷೆ ನೀಡಲು ಕಳುಹಿಸಿದ್ದಾರೆ.
https://twitter.com/surbhirawatpfa/status/1637423313369858048?ref_src=twsrc%5Etfw%7Ctwcamp%5Etweetembed%7Ctwterm%5E1637423313369858048%7Ctwgr%5E57960ae9ad906ba26f23b80671d99795ef2e33dc%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fshocking-video-up-man-brutally-ties-dog-to-two-sheeler-drags-it-on-road-arrested
https://twitter.com/fpjindia/status/1637417499359625217?ref_src=twsrc%5Etfw%7Ctwcamp%5Etweetembed%7Ctwterm%5E1637433769278980097%7Ctwgr%5E57960ae9ad906ba26f23b80671d99795ef2e33dc%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fshocking-video-up-man-brutally-ties-dog-to-two-sheeler-drags-it-on-road-arrested