Shocking Video | ವಿಚಾರಣೆ ವೇಳೆ ಗರ್ಭಿಣಿಯನ್ನು ಎಳೆದು ನೆಲಕ್ಕೆ ತಳ್ಳಿದ ಪೊಲೀಸ್….!

ಗರ್ಭಿಣಿಯನ್ನ ಫ್ಲೋರಿಡಾ ಪೋಲೀಸ್ ಅಧಿಕಾರಿಯೊಬ್ಬರು ಕಾರ್ ನಿಂದ ಎಳೆದು ಕೆಳಗೆ ತಳ್ಳಿರೋ ಘಟನೆ ವರದಿಯಾಗಿದೆ. ಈ ವೇಳೆ ಆಕೆ ನಾನು ಗರ್ಭಿಣಿ ಎಂದು ಕೂಗಿದ್ದಾರೆ. ಈ ಆಘಾತಕಾರಿ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ.

ಮೇ ತಿಂಗಳಲ್ಲಿ ಹ್ಯಾರಿ ಹಾರ್ಡಿ ಮತ್ತು ನೆರಿಲಿಯಾ ಲಾರೆಂಟ್ ಎಂಬ ದಂಪತಿ ಪೊಲೀಸ್ ಅಧಿಕಾರಿಯೊಂದಿಗೆ ತೀವ್ರ ವಾದದಲ್ಲಿ ತೊಡಗಿದ್ದು, ಬೋಕಾ ರಾಟನ್‌ನಲ್ಲಿ ಈ ಘಟನೆ ನಡೆದಿದೆ.

ಮ್ಯಾಥ್ಯೂ ಮೆಕ್‌ನಿಕೋಲ್ ಎಂದು ಗುರ್ತಿಸಿಕೊಂಡಿರುವ ಪೊಲೀಸ್ ಅಧಿಕಾರಿ ಬೋಕಾ ರಾಟನ್ ತನ್ನ ನಗರ ಎಂದು ಹೇಳುತ್ತಾ ದಂಪತಿ ಜೊತೆ ಜಗಳಕ್ಕಿಳಿದಿದ್ದಾರೆ. ಮ್ಯಾಥ್ಯೂ ನೆರಿಲಿಯಾಳನ್ನು ಕಾರಿನಿಂದ ಹೊರಬರುವಂತೆ ಆದೇಶಿಸುತ್ತಾರೆ. ತರುವಾಯ ಆಕೆಯ ತೋಳನ್ನು ಹಿಡಿದು ನೆಲಕ್ಕೆ ತಳ್ಳುತ್ತಾರೆ. ನೆಲಕ್ಕೆ ಬಿದ್ದ ಆಕೆ, “ನಾನು ಗರ್ಭಿಣಿ” ಎಂದು ಕೂಗುತ್ತಾರೆ.

ಈ ವೇಳೆ ಹ್ಯಾರಿ ಪೋಲೀಸರಿಗೆ, “ಅವಳು ಆರು ತಿಂಗಳ ಗರ್ಭಿಣಿ, ನಿಮಗೇನಾಗಿದೆ?” ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಘಟನೆಯ ನಂತರ ಮ್ಯಾಥ್ಯೂ ಮೆಕ್‌ನಿಕೋಲ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಹ್ಯಾರಿ ಮತ್ತು ಮ್ಯಾಥ್ಯೂ ದಂಪತಿ ಸ್ಥಳೀಯ ಪ್ರದೇಶದಲ್ಲಿ ಸಾರ್ವಜನಿಕರೊಂದಿಗೆ ವಿವಾದ ಹೊಂದಿದ್ದು, ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬಗ್ಗೆ ಸಿಟ್ಟಿಗೆದ್ದ ಪೊಲೀಸ್ ಅವರನ್ನು ವಿಚಾರಣೆ ಮಾಡುವ ನೆಪದಲ್ಲಿ ದುರ್ವರ್ತನೆ ತೋರಿದ್ದರು. ಮತ್ತೊಂದೆಡೆ ನೆರಿಲಿಯಾ ಲಾರೆಂಟ್ ಅವರು ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದ ಕಾರಣ ಮತ್ತು ಬಂಧನದ ವೇಳೆ ಸುಳ್ಳು ಹೇಳಿದ್ದಕ್ಕಾಗಿ ಅವರನ್ನೂ ಬಂಧಿಸಲಾಗಿತ್ತು.

https://youtu.be/u-PYO5I5s4Q

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read