SHOCKING : ಹಸಿವಿನಿಂದ ಕಂಗೆಟ್ಟು ಸತ್ತ ಬೆಕ್ಕಿನ ಹಸಿ ಮಾಂಸವನ್ನೇ ತಿಂದ ಯುವಕ..!

ಹಸಿವು ತಾಳಲಾರದೇ ಯುವಕನೋರ್ವ ಹಸಿ ಬೆಕ್ಕಿನ ಮಾಂಸವನ್ನೇ ತಿಂದ ಭೀಕರ ಘಟನೆ ಕೇರಳದ ಕುಟ್ಟಿಪುರಂನಲ್ಲಿ ನಡೆದಿದೆ.

ಹಸಿವಿನ ಪ್ರಜ್ಞೆಯನ್ನು ಕಳೆದುಕೊಂಡ ಯುವಕ ಸತ್ತ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ಯುವಕ ಅಸ್ಸಾಂ ನಿವಾಸಿ ಎಂದು ಹೇಳಲಾಗುತ್ತಿದೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಜನನಿಬಿಡ ಬಸ್ ನಿಲ್ದಾಣದ ಆವರಣದಲ್ಲಿ ಕಳೆದ ಶನಿವಾರ ಸಂಜೆ ಈ ಘಟನೆ ವರದಿಯಾಗಿದೆ. 27 ವರ್ಷದ ವ್ಯಕ್ತಿ ಅಸ್ಸಾಂನ ಧುಬ್ರಿ ಜಿಲ್ಲೆಯವನು ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ಕುಳಿತು ಸತ್ತ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿರುವುದನ್ನು ಸ್ಥಳೀಯರು ಗುರುತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಯುವಕನನ್ನು ಪ್ರಶ್ನಿಸಿದಾಗ ಅವನು ‘ ನಾನು ಕಳೆದ ಐದು ದಿನಗಳಿಂದ ಏನನ್ನೂ ತಿಂದಿರಲಿಲ್ಲ, ಬಹಳ ಹಸಿದಿದ್ದೇನೆ ಎಂದು ಹೇಳಿದನು. ನಂತರ ಪೊಲೀಸ್ ಅಧಿಕಾರಿಗಳು ತಿನ್ನಲು ಆಹಾರವನ್ನು ಖರೀದಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯುವಕ ಅಸ್ಸಾ ಮೂಲದವನಾಗಿದ್ದು, ಯುವಕನಿಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಇದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಸದ್ಯ, ಆತನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ತಿಸ್ಸೂರ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆತನ ಕುಟುಂಬಸ್ಥರು ಬಂದ ನಂತರ ಅವರಿಗೆ ಒಪ್ಪಿಸಲಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read