SHOCKING : ಜರ್ಮನಿಯ ‘ಕ್ರಿಸ್ಮಸ್’ ಮಾರುಕಟ್ಟೆಗೆ ಕಾರು ನುಗ್ಗಿಸಿ ಇಬ್ಬರು ಸಾವು, 68 ಮಂದಿಗೆ ಗಾಯ : ಭಯಾನಕ ವಿಡಿಯೋ ವೈರಲ್ |VIDEO

ಜರ್ಮನಿಯ ಮ್ಯಾಗ್ಡೆಬರ್ಗ್ನ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಜನಸಮೂಹದ ಮೇಲೆ ಹರಿದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಘಟನೆಯು ಎಲ್ಬೆ ನದಿಗೆ ಹತ್ತಿರವಿರುವ ಟೌನ್ ಹಾಲ್ ಬಳಿಯ ಓಲ್ಡ್ ಮಾರ್ಕೆಟ್ ಪ್ರದೇಶದಲ್ಲಿರುವ ಮ್ಯಾಗ್ಡೆಬರ್ಗ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಸಂಜೆ 7: 04 ಕ್ಕೆ ಸಂಭವಿಸಿದೆ.ಐಷಾರಾಮಿ ಕಾರು ಜನನಿಬಿಡ ಪ್ರದೇಶಕ್ಕೆ ವೇಗವಾಗಿ ಚಲಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ನಗರದ ಸೆಂಟ್ರಲ್ ಟೌನ್ ಹಾಲ್ ಚೌಕದಲ್ಲಿ ವಾಹನವು “ಕ್ರಿಸ್ಮಸ್ ಮಾರುಕಟ್ಟೆಯುದ್ದಕ್ಕೂ ಕನಿಷ್ಠ 400 ಮೀಟರ್” ಚಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಸ್ಥಳೀಯರನ್ನು ಆಘಾತಕ್ಕೀಡು ಮಾಡಿದೆ. ಕ್ರಿಸ್ಮಸ್ ಮಾರುಕಟ್ಟೆಯ ಹಬ್ಬದ ಉತ್ಸಾಹವನ್ನು ಮರೆಮಾಡಿದೆ.

ಶುಕ್ರವಾರ. ರಜಾ ದಿನ ರಾತ್ರಿ 7 ಗಂಟೆ ಸುಮಾರಿಗೆ ಕಾರೊಂದು ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ನುಗ್ಗಿದೆ. ಶಂಕಿತನನ್ನು ಬಂಧಿಸಲಾಗಿದೆ. ಆರೋಪಿಯನ್ನು 2006 ರಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದ 50 ವರ್ಷದ ಸೌದಿ ವೈದ್ಯ ಎಂದು ಗುರುತಿಸಲಾಗಿದೆ.ಘಟನಾ ಸ್ಥಳದ ದೃಶ್ಯಗಳು ಆಂಬ್ಯುಲೆನ್ಸ್ಗಳು ಮತ್ತು ಅಗ್ನಿಶಾಮಕ ಎಂಜಿನ್ಗಳು ಸ್ಥಳಕ್ಕೆ ಧಾವಿಸುತ್ತಿರುವುದನ್ನು ತೋರಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಸದ್ಯ ಚಾಲಕನನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read