ಕಲಬುರಗಿ: ಪರಸ್ಪರ ಡಿಕ್ಕಿಯಾಗಿ ಎರಡು ಬೈಕ್ ಗಳು ಹೊತ್ತಿ ಉರಿದಿವೆ. ಅಪಘಾತದಲ್ಲಿ ಓರ್ವ ಸವಾರ ಸಾವು ಕಂಡಿದ್ದಾರೆ.
ಮೈಮೇಲೆ ಪೆಟ್ರೋಲ್ ಬಿದ್ದು ಬೆಂಕಿ ತಗುಲಿ ಸವಾರ ಸಜೀವ ದಹನವಾಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ದುರಂತ ನಡೆದಿದೆ. ಅವಘಡದಲ್ಲಿ ಸವಾರ ದಶರಥ ಮಡಿವಾಳ(28) ಸಜೀವ ದಹನವಾಗಿದ್ದಾರೆ. ಅಪಘಾತದಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ,