SHOCKING : ಹೆಂಡತಿ ಮಕ್ಕಳನ್ನು ಬರ್ಬರವಾಗಿ ಕೊಂದು ಶವಗಳ ಜೊತೆ 3 ದಿನ ಕಾಲ ಕಳೆದ ಪತಿ

ಲಕ್ನೋ : 32 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದು ಶವಗಳ ಜೊತೆ ಮೂರು ದಿನ ಕಾಲ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ. ಶವದ ದುರ್ವಾಸನೆ ಬರುವವರೆಗೂ ಶವಗಳ ಪಕ್ಕದಲ್ಲಿ ಮೂರು ರಾತ್ರಿಗಳನ್ನು ಕಳೆದಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರಾಮ್ ಲಗನ್ ತನ್ನ ಪತ್ನಿ ಜ್ಯೋತಿ (30) ಗೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದ ಮೇಲೆ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅವನು ತನ್ನ ಇಬ್ಬರು ಮಕ್ಕಳಾದ ಪಾಯಲ್ (6) ಮತ್ತು ಆನಂದ್ (3) ರನ್ನು ಕೊಂದಿದ್ದಾನೆ. ಲಕ್ನೋದ ಬಿಜ್ನೋರ್ ಪ್ರದೇಶದ ಸರವಣ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

“ರಾಮ್ ಲಗಾನ್ ಮದುವೆಯಾಗಿ ಏಳು ವರ್ಷಗಳಾಗಿದ್ದು ತನ್ನ ಹೆಂಡತಿ ಪರ ಪುರುಷನ ಜೊತೆ ಅಕ್ರಮ ಸಂಬಂಧದಲ್ಲಿದ್ದಾಳೆ ಎಂದು ಶಂಕಿಸಿದ್ದಾನೆ ಮತ್ತು ಅವಳು ಫೋನ್ ನಲ್ಲಿ ಮಾತನಾಡುವಾಗ ಅವಳ ಮೇಲೆ ಬೇಹುಗಾರಿಕೆ ಮಾಡುತ್ತಿದ್ದನು ಎಂದು ಆರೋಪಿಸಲಾಗಿದೆ. ತ್ರಿವಳಿ ಕೊಲೆಯ ನಂತರ ಆರೋಪಿ ತನ್ನ ಹೆಂಡತಿ ಮತ್ತು ಮಕ್ಕಳು ತನ್ನ ಪಕ್ಕದಲ್ಲಿಯೇ ಸತ್ತು ಬಿದ್ದಿರುವುದನ್ನು ಕಂಡು ವಿಚಲಿತನಾಗದೆ ಅದೇ ಕೋಣೆಯಲ್ಲಿ ರಾತ್ರಿ ಕಳೆದಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read