ನಾವು ಹಾವು ಎಂದಾಕ್ಷಣ ಬೆಚ್ಚಿ ಬೀಳುತ್ತೇವೆ. ಅದರಲ್ಲೂ ಹಾವಿಗೆ ಮುತ್ತಿಡುವುದು , ಅದರ ಜೊತೆ ಸರಸವಾಡುವುದು ಅಂದರೆ ಏನು ತಮಾಷೆಯ ವಿಷಯನಾ..? ಯುವತಿಯೊಬ್ಬಳು ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಚುಂಬಿಸಿ ಮತ್ತು ಸರ್ಪದೊಂದಿಗೆ ಮೋಜು ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಹುಡುಗಿ ಯಾವುದೇ ಭಯ ಇಲ್ಲದೇ, ನಿರ್ಭೀತಿಯಿಂದ ಹಾವಿನ ಬಾಯಿಗೆ ಮುತ್ತಿಡುತ್ತಾಳೆ. ಆದರೆ ಹಾವು ಮಾತ್ರ ಕೊಂಚ ಕೂಡ ಮಿಸುಕಾಡದೇ ಸುಮ್ಮನಿರುತ್ತದೆ. ಯುವತಿಯ ಧೈರ್ಯಕ್ಕೆ ನೆಟ್ಟಿಗರು ಶಬ್ಬಾಷ್ ಗಿರಿ ಕೊಟ್ಟಿದ್ದಾರೆ. ಈ ವಿಡಿಯೋಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
OMG are you serious?? pic.twitter.com/EzM1Iqy4Qc
— The Figen (@TheFigen_) March 22, 2024