3 ಸಾವಿರ ಕೊಟ್ಟು ಎಸಿ ಟಿಕೆಟ್ ತಗೊಂಡ್ರೆ ಇಲಿಗಳ ಕಾಟ ; ದಕ್ಷಿಣ ಬಿಹಾರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಪರದಾಟ | Watch

ರೈಲಲ್ಲಿ ಪ್ರಯಾಣ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟ. ಆದ್ರೆ, ಇಲಿಗಳ ಕಾಟ ಶುರುವಾದ್ರೆ ಏನ್ ಮಾಡೋದು ? ಇಂಥದ್ದೊಂದು ಘಟನೆ ದಕ್ಷಿಣ ಬಿಹಾರ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಪ್ರಶಾಂತ್ ಕುಮಾರ್ ಅನ್ನೋ ಪ್ರಯಾಣಿಕ ಎಸಿ 2 ಕೋಚ್‌ನಲ್ಲಿ ಹೋಗ್ತಿದ್ರು. ಮೂರು ಸಾವಿರ ರೂಪಾಯಿ ಕೊಟ್ಟು ಟಿಕೆಟ್ ತಗೊಂಡಿದ್ರು. ಆದ್ರೆ, ಅಲ್ಲಿ ಇಲಿಗಳ ಕಾಟ ಶುರುವಾಗಿತ್ತು.

ಹೊದಿಕೆ ಒಳಗೆ ನುಗ್ಗಿ, ಸೀಟ್ ಮೂಲೆಗಳಲ್ಲಿ ಓಡಾಡ್ತಿದ್ದ ಇಲಿಗಳನ್ನ ನೋಡಿ ಪ್ರಶಾಂತ್ ಕುಮಾರ್ ಗಾಬರಿಗೊಂಡ್ರು. ತಕ್ಷಣ ವಿಡಿಯೋ ಮಾಡಿ, ಎಕ್ಸ್ (ಟ್ವಿಟರ್) ಮೂಲಕ ರೈಲ್ವೆ ಇಲಾಖೆಗೆ ದೂರು ಕೊಟ್ಟಿದ್ದಾರೆ. “ಮೂರು ಸಾವಿರ ಕೊಟ್ಟು ಟಿಕೆಟ್ ತಗೊಂಡ್ರೆ, ಇಲಿಗಳ ಕಾಟನಾ ?” ಅಂತ ಪ್ರಶ್ನೆ ಮಾಡಿದ್ದಾರೆ.

ವಿಡಿಯೋದಲ್ಲಿ ಇಲಿಗಳು ಸೀಟ್ ಮೇಲೆ, ಲಗೇಜ್ ಮೇಲೆ ಓಡಾಡ್ತಿರೋದು ಕಾಣ್ತಿದೆ. ರಾತ್ರಿ ಮಲಗುವಾಗ ಇಲಿಗಳು ಮೈಮೇಲೆ ಬಿದ್ರೆ ಏನ್ ಮಾಡೋದು ಅಂತ ಪ್ರಯಾಣಿಕರು ಆತಂಕಗೊಂಡಿದ್ದಾರೆ. ತಕ್ಷಣ ಆರ್‌ಪಿಎಫ್‌ಗೆ ಕರೆ ಮಾಡಿ ಸಹಾಯ ಕೇಳಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ರೈಲ್ವೆ ಇಲಾಖೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. “ಎಸಿ ಕೋಚ್‌ನಲ್ಲೂ ಈ ಪರಿಸ್ಥಿತಿನಾ? ರೈಲ್ವೆ ಇಲಾಖೆ ಏನ್ ಮಾಡ್ತಿದೆ?” ಅಂತ ಪ್ರಶ್ನೆ ಮಾಡಿದ್ದಾರೆ. ಆದ್ರೆ, ರೈಲ್ವೆ ಇಲಾಖೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಒಟ್ಟಿನಲ್ಲಿ, ದುಡ್ಡು ಕೊಟ್ಟು ಟಿಕೆಟ್ ತಗೊಂಡ್ರೂ ಪ್ರಯಾಣಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ರೈಲ್ವೆ ಇಲಾಖೆ ಈ ಬಗ್ಗೆ ಗಮನ ಹರಿಸ್ತಾರಾ ಕಾದು ನೋಡಬೇಕು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read