ಖ್ಯಾತ ನಟಿಯಿಂದ ಶಾಕಿಂಗ್ ಮಾಹಿತಿ ಬಹಿರಂಗ: ನಟ ಸಲ್ಮಾನ್ ಖಾನ್ ನಿಂದ ದೂರ ಇರುವಂತೆ ಬೆದರಿಕೆ

ನಟ ಸಲ್ಮಾನ್ ಖಾನ್‌ ನಿಂದ ದೂರ ಉಳಿಯುವಂತೆ ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಎಚ್ಚರಿಕೆ ನೀಡಿದೆ ಎಂದು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ

ಸಲ್ಮಾನ್ ಖಾನ್ ರಾಖಿ ಸಾವಂತ್ ಅವರೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದು, ‘ಬಿಗ್ ಬಾಸ್‌’ನ ವಿವಿಧ ಸೀಸನ್‌ ಗಳಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ವೈಯಕ್ತಿಕ ಬಿಕ್ಕಟ್ಟಿನ ಸಮಯದಲ್ಲಿ ಸಲ್ಮಾನ್ ರಾಖಿಗೆ ಸಹಾಯ ಮಾಡಿದ್ದಾರೆ. ಇದೀಗ ಆಘಾತಕಾರಿ ಸಂಗತಿಯೊಂದರಲ್ಲಿ ರಾಖಿ, ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ತನಗೆ ಹೊಸ ಇಮೇಲ್ ಬೆದರಿಕೆಯನ್ನು ನೀಡಿದೆ. ಸಲ್ಮಾನ್‌ ಖಾನ್ ಅವರಿಂದ ದೂರವಿರುವಂತೆ ಎಚ್ಚರಿಸಿದೆ. ಮತ್ತು ಮುಂಬೈನಲ್ಲಿ ಸಲ್ಮಾನ್ ಖಾನ್ ನನ್ನು ಕೊಲ್ಲುತ್ತೇವೆ ಎಂದು ಘೋಷಿಸಿದೆ ಎಂದು ರಾಖಿ ಹೇಳಿದ್ದಾರೆ.

ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತನಗೆ ಎಚ್ಚರಿಕೆ ನೀಡಿದೆ ಎಂದು ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ. ನೀವು ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದರೆ, ನಾವು ನಿನ್ನನ್ನು ಕೊಲ್ಲುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ನನ್ನ ತಾಯಿಗೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ಸಹಾಯ ಮಾಡಿದ ಕಾರಣ ನಾನು ಸಲ್ಮಾನ್ ಖಾನ್ ಬಗ್ಗೆ ಮಾತನಾಡುತ್ತೇನೆ. ಅವರು 50 ಲಕ್ಷ ರೂ. ನೀಡಿದ್ದರು. ನಾನೇಕೆ ಮಾತನಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ನಾನು ಭಯಗೊಂಡಿದ್ದೇನೆ. ಗೊಂದಲಕ್ಕೊಳಗಾಗಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಅದನ್ನು ದೇವರಿಗೆ ಬಿಡುತ್ತಿದ್ದೇನೆ. ನನಗೆ ಬಂದಿರುವ ಇಮೇಲ್‌ ಗೆ ತಾನು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read