ಬೆಂಗಳೂರು: ಕಣ್ಣಿಗೆ ಖಾರದಪುಡಿ ಎರಚಿ, ಮೈಮೇಲೆ ಎಣ್ಣೆ ಸುರಿದು, ಕೈಕಾಲು ಕಟ್ಟಿ ಹಾಕಿ ಎಂಟರಿಂದ ಹತ್ತು ಬಾರಿ ಇರಿದು ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ.
ಓಂ ಪ್ರಕಾಶ್ ಎದೆ, ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ರಕ್ತದ ಮಡುವಿನಲ್ಲಿ ಒದ್ದಾಡಿ ನಿವೃತ್ತ ಓಂ ಪ್ರಕಾಶ್ ಪ್ರಾಣ ಬಿಟ್ಟಿದ್ದು, ಗಂಡನ ಉಸಿರು ನಿಲ್ಲುವವರೆಗೂ ಪತ್ನಿ ಕಾದು ನಿಂತಿದ್ದರು. ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ಮೃತ ದೇಹವನ್ನು ರವಾನೆ ಮಾಡಲಾಗಿದ್ದು, ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು. ನಿನ್ನೆ ಸಂಜೆಯೇ ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಡಿವಾಳ ಎಸಿಪಿ ವಾಸುದೇವ್ ಹೆಗಲಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಓಂ ಪ್ರಕಾಶ್ ಪದ್ಮಿನಿ ಮತ್ತು ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ವಿಚಾರಣೆಯ ನಂತರ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
ಓಂ ಪ್ರಕಾಶ್, ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸಂಜೆ ವೇಳೆಗೆ ಪತ್ನಿ ಮತ್ತು ಪುತ್ರಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗುವುದು. ಆಸ್ತಿ ವಿಚಾರಕ್ಕೆ ಪತ್ನಿ ಕೊಲೆ ಮಾಡಿರುವ ಶಂಕೆ ಇದೆ.