ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಇತ್ತೀಚೆಗೆ ರೆಪೊ ದರವನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್,ಬಿ,ಐ,) ಹೊಸ ಗ್ರಾಹಕರಿಗೆ ಗೃಹ ಸಾಲದ ಬಡ್ಡಿ ದರಗಳನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡಿದೆ.
ಇದರಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿ ದರ ಶೇಕಡ 8.45 ರಿಂದ ಶೇಕಡ 8.70ಕ್ಕೆ ಏರಿಕೆಯಾಗಿದೆ. ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಗೆ ಅನುಗುಣವಾಗಿ ಬಡ್ಡಿ ದರ ಏರಿಕೆಯಾಗುತ್ತದೆ. ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದ್ದರೆ ಅಂತಹವರಿಗೆ ವಿಧಿಸಲಾಗುವ ಬಡ್ಡಿದರ ಶೇಕಡ 7.50 ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರು ಬಡ್ಡಿಯ ಹೊರೆ ಹೊರಬೇಕಿದೆ.