SHOCKING NEWS: ಮಾಲೀಕನ ಮಗನನ್ನೇ ಹತ್ಯೆಗೈದ ಕಾರು ಚಾಲಕ

ಕೊಪ್ಪಳ: ಕಾರು ಮಾಲಿಕನ ಮಗನನ್ನೇ ಚಾಲಕ ಬಾವಿಯಲ್ಲಿ ಮುಳುಗಿಸಿ ಹತ್ಯೆಗೈದಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದಿದೆ.

ಪ್ರಜ್ವಲ್ ಮೃತ ಬಾಲಕ. ಆರೋಪಿ ಕಾರು ಚಾಲಕ ಶಂಕರ್‌ ಅಪ್ರಾಪ್ತ ಮಕ್ಕಳಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದನಂತೆ. ಬಳಿಕ ಆ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಮಕ್ಕಳಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಇದೇ ರೀತಿ ಬಾಲಕ ಪ್ರಜ್ವಲ್ ಗೂ ಬೆದರಿಕೆ ಹಾಕಿದ್ದಾನೆ. ಆದರೆ ಬಾಲಕ ಹಣ ಕೊಟ್ಟಿಲ್ಲ, ಇಬ್ಬರ ನಡುವೆ ಜಗಳವಾಗಿದೆ. ಬಾಲಕ ಪ್ರಜ್ವಲ್ ನನ್ನು ಕಾರು ಚಾಲಕ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಪ್ರಜ್ವಲ್ ತಂದೆಗೆ ಕರೆ ಮಾಡಿದ ಶಂಕರ್ ನಿಮ್ಮ ಮಗ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾನೆ. ಕೊಲೆಯನ್ನು ಗಮನಸಿದ್ದ ಯುವಕರಿಗೆ ಬೆದರಿಕೆ ಹಾಕಿದ್ದ. ಶಂಕರ್ ಮೇಲೆ ಅನುಮಾನಗೊಂಡು ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಬಾಲಕನನ್ನು ಕೊಂದಿರುವ ವಿಷಯ ಬಾಯ್ಬಿಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read