ಚಿಕ್ಕಮಗಳೂರು: ಮಗ ನದಿಯಲ್ಲಿ ಕೊಚ್ಚಿ ಹೋದ ವಿಷಯ ತಿಳಿದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮನೆಗೆ ಹಿಂಭಾಗದ ಕೆರೆಗೆ ಹಾರಿ ತಾಯಿ ರವಿಕಲಾ(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಕೊಳಮಗಿ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಭದ್ರಾ ನದಿಗೆ ಪಿಕಪ್ ವಾಹನ ಬಿದ್ದಿದ್ದು, ಈ ವಾಹನದಲ್ಲಿದ್ದ ಸಮಂತ್ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಕಾಫಿ ತೋಟದ ಕಾರ್ಮಿಕರನ್ನು ಕರೆತರಲು ತೆರಳುವಾಗ ವಾಹನ ನದಿಗೆ ಬಿದ್ದಿತ್ತು.
ಮಗ ಸುಮಂತ್ ಪಿಕಪ್ ವಾಹನದ ಸಮೇತ ಭದ್ರಾ ನದಿಗೆ ಬಿದ್ದಿದ್ದ ವಿಚಾರ ತಿಳಿದು ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.