ಹಿಟ್ಟಿಗೆ ಉಗುಳುತ್ತಾ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯನ್ನ ಉತ್ತರಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಉಗುಳುತ್ತಾ ಹೋಟೆಲ್‌ನಲ್ಲಿ ಚಪಾತಿ (ರೊಟ್ಟಿ) ತಯಾರಿಸುತ್ತಿದ್ದ ವ್ಯಕ್ತಿಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗಾಜಿಯಾಬಾದ್‌ನ ಸಾಹಿಬಾಬಾದ್ ಪ್ರದೇಶದ ಹೋಟೆಲ್‌ನ ವೀಡಿಯೊ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 18 ರಂದು ತಿಲಾ ಮೋರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಸಾಹಿಬಾಬಾದ್ ಎಸ್ಪಿ ಹೇಳಿದ್ದಾರೆ. ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ತಸೀರುದ್ದೀನ್ ಎಂದು ಗುರುತಿಸಿ ಜನವರಿ 19 ರಂದು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
https://twitter.com/hareram_ya/status/1616321706792214528?ref_src=twsrc%5Etfw%7Ctwcamp%5Etweetembed%7Ctwterm%5E1616321706792214528%7Ctwgr%5Ed1be3d5d3d3a99fde192b0c02e68c7e9c00efd60%7Ctwcon%5Es1_&ref_url=https%3A%2F%2Fwww.freepressjournal.in%2Findia%2Fshocking-man-seen-making-chapatis-at-sahibabad-hotel-by-applying-spit-in-viral-video-arrested