ಕಾರವಾರ: ಅನ್ನದ ಅಗಳು ಗಂಟಲಿಗೆ ಸಿಲುಕಿ ವ್ಯಕ್ತಿ ಸಾವು ಕಂಡ ಘಟನೆ ಬಿಣಗಾ ಗ್ರಾಮದಲ್ಲಿ ನಡೆದಿದೆ. ಅಮಿತ್ ಮಾಳಸೇರ(38) ಮೃತಪಟ್ಟವರು ಎಂದು ಹೇಳಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಅನ್ನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಅಮಿತ್ ಪರದಾಡಿದ್ದರು. ಮನೆಯವರು ನೀರು ಕುಡಿಸಿದ ತಕ್ಷಣ ಕುಸಿದು ಬಿದ್ದಿದ್ದ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.