ಶಿವಮೊಗ್ಗ: ಜಾನುವಾರುಗಳಿಗೆ ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ನಡೆದಿದೆ.
ಹುಚ್ಚನಾಯಕ್(65) ಮೃತಪಟ್ಟವರು ಎಂದು ಹೇಳಲಾಗಿದೆ. ತಮ್ಮ ಹಸುಗಳಿಗೆ ಮೇವು ತರಲು ಗದ್ದೆಗೆ ತೆರಳಿದ್ದ ಅವರು ಹುಲ್ಲು ಕೊಯ್ಯುವಾಗ ಕಾಲಿಗೆ ವಿಷಪೂರಿತ ಹಾವು ಕಚ್ಚಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.