SHOCKING: ಟೈಂಪಾಸ್ ಲವ್ ಬೇಡ, ನನ್ನನ್ನು ಮದುವೆಯಾಗು ಎಂದಿದ್ದಕ್ಕೆ 8 ಬಾರಿ ಚಾಕುವಿನಿಂದ ಇರಿದು ಪ್ರಿಯತಮೆ ಬರ್ಬರ ಹತ್ಯೆ

ಬೆಂಗಳೂರು: ಮದುವೆಯಾಗು ಎಂದಿದ್ದಕ್ಕೆ ಚಾಕುವಿನಿಂದ ಇರಿದು ಪ್ರಿಯತಮೆಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಳ್ಳಣ್ಣ ಗಾರ್ಡನ್ ನಲ್ಲಿ ಘಟನೆ ನಡೆದಿದೆ.

ಅ. 31ರಂದು ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೇಣುಕಾ ಅವರನ್ನು ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಕೊಲೆ ಮಾಡಿದ್ದಾನೆ. ಮದುವೆಯಾಗಿ ಪತಿಯಿಂದ ದೂರವಾಗಿದ್ದ ಮೃತ ರೇಣುಕಾ ಅದೇ ಏರಿಯಾದ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಜೊತೆಗೆ ಪ್ರೇಮ ಬೆಳೆದಿತ್ತು. ಮದುವೆಯಾಗಿ ಪತ್ನಿಯ ಜೊತೆಗೆ ವಾಸವಾಗಿದ್ದ ಅಂಬೇಡ್ಕರ್ ಅಲಿಯಾಸ್ ಕುಟ್ಟಿಗೆ ಟೈಂಪಾಸ್ ಲವ್ ಬೇಡ, ನನ್ನನ್ನು ಮದುವೆಯಾಗು ಎಂದು ಪಟ್ಟು ಹಿಡಿದಿದ್ದಳು.

ಪುಟ್ಟಿಗೆ ಮದುವೆಯಾಗುವಂತೆ ರೇಣುಕಾ ದುಂಬಾಲು ಬಿದ್ದಿದ್ದಳು. ಅ. 31ರಂದು ಕೆಲಸ ಮುಗಿಸಿ ಮನೆಗೆ ಬರುವಾಗ ರೇಣುಕಾರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನ ಬಳಿ ಮಾತನಾಡಬೇಕು ಎಂದು ರೇಣುಕಾಡನ್ನು ಕರೆದಿದ್ದ ಆರೋಪಿ ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆಯ ಬಳಿ ಎಂಟು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗಾಯಗೊಂಡಿದ್ದ ರೇಣುಕಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

  • ಹೌದು (55%, 240 Votes)
  • ಇಲ್ಲ (32%, 140 Votes)
  • ಹೇಳಲಾಗುವುದಿಲ್ಲ (12%, 54 Votes)

Total Voters: 434

Loading ... Loading ...

Most Read