SHOCKING : ಬೆಂಗಳೂರಲ್ಲಿ ಒಂಟಿ ಮಹಿಳೆಯಿದ್ದ ಕಾರಿನ ಬಳಿ ಬಂದು ಕಿಡಿಗೇಡಿ ಮಾಡಿದ್ದೇನು..? ವಿಡಿಯೋ ನೋಡಿ

ಬೆಂಗಳೂರಿನಲ್ಲಿ ಕಾರಲ್ಲಿ ಕುಳಿತಿದ್ದ ಮಹಿಳೆಯನ್ನು ಬೆದರಿಸಿ ಖದೀಮ ದರೋಡೆಗೆ ಯತ್ನಿಸಿದ್ದು, ವಿಡಿಯೋ ವೈರಲ್ ಆಗಿದೆ.ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ವಾಹನದಲ್ಲಿ ಕಾಯುತ್ತಿದ್ದ ಮಹಿಳೆಯೊಬ್ಬರು ದರೋಡೆ ಯತ್ನದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ. ಆತನ ಉದ್ದೇಶ ಕಳ್ಳತನ ಅಥವಾ ಬೇರೆ ಏನಾದರೂ ಇತ್ತ ಎಂಬುದು ಸ್ಪಷ್ವವಾಗಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಮಹಿಳೆಯ ಕಾರಿನ ಬಳಿ ಬಂದು ಕಾರಿನ ಎಲ್ಲಾ ನಾಲ್ಕು ಡೋರ್ ಗಳನ್ನ ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.
ಇದನ್ನು ಗಮನಿಸಿದ ಮಹಿಳೆ ಘಟನೆಯನ್ನು ತನ್ನ ಫೋನ್ನಲ್ಲಿ ರೆಕಾರ್ಡ್ ಮಾಡಲು ಪ್ರಾರಂಭಿಸಿದಳು. ನಂತರ ಆ ವ್ಯಕ್ತಿ ತನ್ನ ವಾಹನದ ಬಲಭಾಗಕ್ಕೆ ಸರಿದು ವಿಂಡೋ ಮುರಿಯಲು ಪ್ರಯತ್ನಿಸಿದನು, ಇದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಇದರಿಂದ ಭಯಭೀತಳಾದ ಮಹಿಳೆ ತನ್ನ ಕಾರನ್ನು ಸ್ಟಾರ್ಟ್ ಮಾಡಿ ಬೇಗನೆ ಸುರಕ್ಷಿತವಾಗಿ ಹೊರಟುಹೋದಳು.
ಆಘಾತಕಾರಿ ವಿಚಾರ ಅಂದರೆ ಜನನಿಬಿಡ ಬೀದಿಯಲ್ಲಿ ಯಾವುದೇ ಭಯ ಇಲ್ಲದೇ ಈ ಕೃತ್ಯ ಎಸಗಿದ್ದಾನೆ.

https://twitter.com/i/status/1840754480599736615

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read