ಬೆಂಗಳೂರು : ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯೋರ್ವ ವಿಧವೆ ಪ್ರಿಯತಮೆಯನ್ನು ಪೆಟ್ರೋಲ್ ಸುರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
52 ವರ್ಷದ ವ್ಯಕ್ತಿ 26 ವರ್ಷದ ಪ್ರೇಯಸಿಯನ್ನು ಕೊಂದಿದ್ದಾನೆ. ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ನಡುವೆ ಬಿರುಕು ಉಂಟಾಗಿದ್ದು, ನಂತರ ಕೊಲೆಯಲ್ಲಿ ಅಂತ್ಯವಾಗಿದೆ.
ಏನಿದು ಘಟನೆ
26 ವರ್ಷದ ವಿಧವೆ ವನಜಾಕ್ಷಿ ಜೊತೆ 52 ವರ್ಷದ ವ್ಯ ಕ್ತಿ ವಿಠ್ಠಲ ಸಹ ಜೀವನ ನಡೆಸುತ್ತಿದ್ದರು. ಕ್ಯಾಬ್ ಚಾಲಕನಾಗಿದ್ದ ವಿಠ್ಠಲನಿಗೆ ವನಜಾಕ್ಷಿಯ ಪರಿಚಯ ಆಗಿತ್ತು. ವಿಠಲನಿಗೂ ಇಬ್ಬರು ಪತ್ನಿಯರು ಇದ್ದರು. ಮೊದಲ ಪತ್ನಿ ಮೃತಪಟ್ಟಿದ್ದರೆ, ಇನ್ನೋರ್ವ ಪತ್ನಿ ಬೇರೆಯವರ ಜೊತೆ ಪರಾರಿಯಾಗಿದ್ದರು. ನಂತರ ವಿಠಲ ವನಜಾಕ್ಷಿ ಜೊತೆ ಸ್ನೇಹ ಬೆಳೆಸಿದ್ದಾನೆ. 4 ವರ್ಷಗಳಿಂದ ವಿಠ್ಠಲನ ಜೊತೆ ಸಹ ಜೀವನ ನಡೆಸುತ್ತಿದ್ದ ವನಜಾಕ್ಷಿ ಇತ್ತೀಚೆಗೆ ವಿಠ್ಠಲನಿಂದ ದೂರವಾಗಲು ನಿರ್ಧರಿಸಿದ್ದರು. ಯಾಕೆಂದರೆ ಅದೇ ಗ್ರಾಮದ ಮತ್ತೊಬ್ಬರ ಜೊತೆ ವನಜಾಕ್ಷಿ ಸಲುಗೆ ಹೊಂದಿದ್ದಳು. ಈ ವಿಚಾರಕ್ಕೆ ವನಜಾಕ್ಷಿ ಜೊತೆ ವಿಠ್ಠಲ ಹಲವು ಬಾರಿ ಗಲಾಟೆ ಮಾಡಿದ್ದನು.
ಒಂದು ದಿನ ವನಜಾಕ್ಷಿ ಹಾಗೂ ಆ ವ್ಯಕ್ತಿ ಕಾರಿನಲ್ಲಿ ಹೋಗುತ್ತಿದ್ದಾಗ ವಿಠ್ಠಲ ಅವರನ್ನು ಕಾರನ್ನು ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೆ. ಆಗ ವನಜಾಕ್ಷಿ ಮತ್ತು ಇಬ್ಬರು ಕಾರಿನಿಂದ ಇಳಿದು ಓಡಿ ಹೋಗುತ್ತಾರೆ. ಆದರೂ ವಿಠ್ಠಲ ಬೆನ್ನಟ್ಟಿ ವನಜಾಕ್ಷಿಗೆ ಮತ್ತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೆ.ನಂತರ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುತ್ತಾರೆ. ಗಂಭೀರವಾಗಿ ಗಾಯಗೊಂಡ ವನಜಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಡುತ್ತಾರೆ. ಸದ್ಯ ಆರೋಪಿ ವಿಠ್ಠಲನನ್ನು ಪೊಲೀಸರು ಬಂಧಿಸಿದ್ದಾರೆ.