ಬೆಂಗಳೂರು : ಕುಡುಕ ತಮ್ಮನ ಕಾಟ ತಾಳಲಾರದೇ ಅಣ್ಣನೇ ತಮ್ಮನನ್ನ ಹತ್ಯೆಗೈದು ಶವ ಎಸೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾರಿನಲ್ಲಿ ಕೊಲೆ ಮಾಡಿ ಶವವನ್ನ ಪೊದೆಯಲ್ಲಿ ಎಸೆದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಘಟನೆ ಸಂಬಂಧ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಧನರಾಜ್ ಎಂಬಾತ ಅಣ್ಣನಿಂದಲೇ ಹತ್ಯೆಯಾದ ಯುವಕ.
ಏನಿದು ಘಟನೆ
ಅಣ್ಣ ಶಿವರಾಜ್ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದನು. ತಮ್ಮ ಧನರಾಜ್ ತಂದೆ ತಾಯಿ ಜೊತೆ ವಾಸವಾಗಿದ್ದರು. ಆದರೆ ಧನರಾಜ್ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಕೆಲಸಕ್ಕೆ ಹೋಗದೇ ಮನೆಯಲ್ಲಿ ಗಲಾಟೆ ತಂದೆ-ತಾಯಿ ಜೊತೆ ಗಲಾಟೆ ಮಾಡುತ್ತಿದ್ದನು. ಇದರಿಂದ ಬೇಸತ್ತ ಅಣ್ಣ ಶಿವರಾಜ್ ಕೆಲಸ ಕೊಡಿಸುವುದಾಗಿ ತಮ್ಮ ಧನರಾಜ್ ನನ್ನು ಕರೆಸಿಕೊಂಡು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಇಬ್ಬರು ಸಹಚರರ ಜೊತೆ ಕಾರಿನಲ್ಲೇ ಧನರಾಜ್ ನನ್ನ ಕೊಲೆ ಮಾಡಿ ಶವ ಪೊದೆಯಲ್ಲಿ ಎಸೆದು ಹೋಗಿದ್ದಾರೆ. ಅಣ್ಣ ಮಾಡಿದ ಕೆಲಸಕ್ಕೆ ಊರಿಗೆ ಊರೇ ಆಕ್ರೋಶ ವ್ಯಕ್ತಪಡಿಸಿದೆ. ನಿಮ್ಮ ಅಭಿಪಾಯ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
