ಬೆಂಗಳೂರು : ಪಾಪಿ ಮಗನೋರ್ವ ಹೆತ್ತ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಸರೋಜಮ್ಮ (60) ಎಂದು ಗುರುತಿಸಲಾಗಿದೆ. ಅನಿಲ್ (36) ತಾಯಿಯನ್ನೇ ಕೊಂದ ಪಾಪಿ ಮಗ. ಆಗಾಗ ತಾಯಿ ಹಾಗೂ ಮಗನ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಜಮೀನು ಮಾರಾಟ ಮಾಡಲು ಅಡ್ವಾನ್ಸ್ ಪಡೆದಿದ್ದ ಹಣವನ್ನು ಕೊಡುವಂತೆ ಮಗ ತಾಯಿ ಬಳಿ ಕೇಳಿದ್ದಾನೆ. ಆದರೆ ಸರೋಜಮ್ಮ ಹಣ ನೀಡಲಿಲ್ಲ. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ . ಗುರುವಾರ ಸಂಜೆ ಸರೋಜಮ್ಮನನ್ನು ಕೆಳಗೆ ಬೀಳಿಸಿದ ಅನಿಲ್ ಚಾಕು ತೆಗೆದುಕೊಂಡು ಆಕೆಯ ಕತ್ತು ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಸರೋಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
You Might Also Like
TAGGED:ಕತ್ತು ಸೀಳಿ