ಶಿವಮೊಗ್ಗ: ರಾಜ್ಯದಲ್ಲಿ ಹೃದಯಾಘಾತ ಸಾವಿನ ಪ್ರಕರಣಗಳು ಮುಂದುವರೆದಿದೆ. ಹೃದಯಘಾತದಿಂದಾಗಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದ ನಿವಾಸಿ ಸಿ.ಪಿ. ಬಸವಣ್ಣಪ್ಪ(45) ಮೃತಪಟ್ಟವರು. ಬಸವಣ್ಣಪ್ಪ ಅವರಿಗೆ ಮಧ್ಯಾಹ್ನ ಹೃದಯಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.