ಬೆಂಗಳೂರು : ಚಿನ್ನದ ದರ ಗಗನಕ್ಕೆ ಏರಿದೆ. ಮುಂಬೈನ ಜವೇರಿ ಬಜಾರ್ ನಲ್ಲಿ 10 ಗ್ರಾಂಗೆ 1 ಲಕ್ಷ ರೂಪಾಯಿಗಳ ಗಡಿಯ ಹತ್ತಿರಕ್ಕೆ ಬಂದಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಈಗ 98,350 ರೂ.ಗೆ ತಲುಪಿದೆ. 1 ಲಕ್ಷ ರೂ. ಮಾರ್ಕ್ ತಲುಪಲು ಕೇವಲ 1,650 ರೂ. ದೂರದಲ್ಲಿದೆ. 22 ಕ್ಯಾರೆಟ್ ಚಿನ್ನದ ಬೆಲೆ 90,150 ರೂ. ಆಗಿದೆ.
ಅಕ್ಷಯ ತೃತೀಯಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಈ ವೇಳೆ ಚಿನ್ನದ ಬೆಲೆ ಒಂದು ಲಕ್ಷ ಸನಿಹಕ್ಕೆ ತಲುಪಿರುವುದು ಚಿನ್ನ ಬಂಗಾರ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಇಂದು 1 ಲಕ್ಷ ರೂ ತಲುಪಬಹುದಾ ಎಂಬ ಕುತೂಹಲವಿದೆ.ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ 500 ರೂ.ಗಳಷ್ಟು ಏರಿಕೆಯಾಗಿ 98,500 ರೂ.ಗಳಿಗೆ ತಲುಪಿದೆ. ಶುಕ್ರವಾರ ಬೆಳ್ಳಿ ಕೆಜಿಗೆ 98,000 ರೂ.ಗಳಲ್ಲಿ ಸ್ಥಿರವಾಗಿ ವಹಿವಾಟು ನಡೆಸಿತ್ತು