SHOCKING : ಶಾಲೆಯಲ್ಲಿ ಶೌಚಾಲಯದ ಸೀಟ್ ನೆಕ್ಕುವಂತೆ ಒತ್ತಾಯ : 26ನೇ ಮಹಡಿಯಿಂದ ಜಿಗಿದು 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ.!

ಕೇರಳದ 15 ವರ್ಷದ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್ ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜನವರಿ 15 ರಂದು ಶಾಲೆಯಿಂದ ಮನೆಗೆ ಮರಳಿದ ನಂತರ ಮಿಹಿರ್ ಅಹ್ಮದ್ ತನ್ನ ಕಟ್ಟಡದ 26 ನೇ ಮಹಡಿಯಿಂದ ಜಿಗಿದಿದ್ದಾನೆ.ಅವನನ್ನು “ಶೌಚಾಲಯದ ಸೀಟ್ ನೆಕ್ಕುವಂತೆ ಒತ್ತಾಯಿಸಲಾಗಿದೆ ಮತ್ತು ಫ್ಲಶ್ ಮಾಡುವಾಗ ತಲೆಯನ್ನು ಶೌಚಾಲಯಕ್ಕೆ ಒತ್ತಿ ಹಿಡಿದು ರ್ಯಾಗಿಂಗ್ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಅಹ್ಮದ್ ಎರ್ನಾಕುಲಂನ ತಿರುವನಿಯೂರ್ ನಲ್ಲಿರುವ ಗ್ಲೋಬಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಯಾಗಿದ್ದನು.

ತ್ರಿಪುನಿಥುರಾದ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅಹ್ಮದ್ ಅನುಭವಿಸಿದ ಕಿರುಕುಳದ ಬಗ್ಗೆ ತನಿಖೆ ನಡೆಸುವಂತೆ ಕೋರಿ ತಾಯಿ ಮಕ್ಕಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೊಚ್ಚಿಯ ತ್ರಿಪುನಿತಾರಾದ ಚಾಯ್ಸ್ ಪ್ಯಾರಡೈಸ್ನಲ್ಲಿರುವ ನಮ್ಮ ಮನೆಯ 26 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಇದರಿಂದ ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ಮೃತ ವಿದ್ಯಾರ್ಥಿ ತಾಯಿ ಕಣ್ಣೀರಿಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read