ದಾವಣಗೆರೆ: ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ರೈತ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿದ್ಗಿಗೆ ಗ್ರಾಮದಲ್ಲಿ ನಡೆದಿದೆ.
30 ವರ್ಷದ ನಾರಪ್ಪ ಮೃತಪಟ್ಟ ರೈತ. ರೋಟೋವೇಟರ್ ಯಂತ್ರಕ್ಕೆ ಸಿಲುಕಿದ ನಾರಪ್ಪನ ತಲೆ ಭಾಗ, ದೇಹ ಛಿದ್ರವಾಗಿದೆ. ಜಮೀನು ಉಳುಮೆ ಮಾಡಲು ರೋಟೋವೇಟರ್ ಯಂತ್ರ ಅಳವಡಿಸಿದ್ದ ಟ್ರ್ಯಾಕ್ಟರ್ ಬಾಡಿಗೆ ಪಡೆಯಲಾಗಿತ್ತು. ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ನಾರಪ್ಪ ಆಕಸ್ಮಿಕವಾಗಿ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
