ಬೆಂಗಳೂರು : ಅಕ್ರಮ ಸಂಬಂಧ ಬೆಳೆಸಿ ವಿವಾಹಿತ ಶಿಕ್ಷಕಿ ವಂಚನೆ ಎಸಗಿದ ಹಿನ್ನೆಲೆ ಮನನೊಂದು ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಕಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನನ್ನು ಆನಂದ (35) ಎಂದು ಗುರುತಿಸಲಾಗಿದೆ. ವಿವಾಹಿತ ಶಿಕ್ಷಕಿ ಹೇಮಲತಾ ವಿರುದ್ಧ ದೂರು ದಾಖಲಾಗಿದ್ದು, ಶಿಕ್ಷಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕ್ಷಕ ಆನಂದ ಮತ್ತು ಹೇಮಲತಾ ಕಳೆದ 8 ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಬ್ಬರು ಒಟ್ಟುಗೂಡಿ ಮಾಕಳಿಯಲ್ಲಿ ಟ್ಯೂಷಬ್ ಸೆಂಟರ್ ಆರಂಭಿಸಿದ್ದರು. ಆದರೆ ಹೇಮಲತಾ ಇತ್ತೀಚೆಗೆ ಮತ್ತೋರ್ವನ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ಈ ವಿಷಯ ಇಬ್ಬರ ನಡುವೆ ಬಿರುಕು ಮೂಡಿಸಿತ್ತು. ಆನಂದ ಟ್ಯೂಷನ್ ಸೆಂಟರ ಗೆ ಹಣ ಹಾಕಿದಲ್ಲದೇ ತನ್ನ ಮನೆಯಿಂದ 5 ಲಕ್ಷ ನೀಡಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ಆಗಿದೆ. ಅಲ್ಲದೇ ಹೇಮಲತಾ ತನ್ನ ಪತಿ ತಿಮ್ಮಯ್ಯಗೆ ವಿಚಾರ ತಿಳಿಸಿ ಅವರಿಂದಲೂ ಬೆದರಿಕೆ ಹಾಕಿಸಿದ್ದರು. ಇದರಿಂದ ಮನನೊಂದ ಆನಂದ ಟ್ಯೂಷನ್ ಸೆಂಟರ್ ನಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಆನಂದ ಹೇಮಲತಾ ಕಿರುಕುಳದ ಬಗ್ಗೆ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದನು. ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.