SHOCKING : ಬೆಂಗಳೂರಲ್ಲಿ ‘ಡೆಲಿವರಿ ಬಾಯ್’ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದ ಕೆಫೆ ಸಿಬ್ಬಂದಿ : ವಿಡಿಯೋ ವೈರಲ್ |WATCH VIDEO

ಬೆಂಗಳೂರು : ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಎದುರಿನ ಹೆಸರಘಟ್ಟ ರಸ್ತೆಯಲ್ಲಿರುವ ಗಬ್ರು ಬಿಸ್ಟ್ರೋ ಅಂಡ್ ಕೆಫೆಯಲ್ಲಿ ಡೆಲಿವರಿ ಬಾಯ್ ಮೇಲೆ ಸಿಬ್ಬಂದಿ ನಿರ್ದಯವಾಗಿ ಹಲ್ಲೆ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿ ಪ್ರಕಾರ ಆರ್ಡರ್ ಮಾಡಿದ ಆಹಾರ ತಡವಾಗಿ ಕೊಟ್ಟಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಹಾಜರಿದ್ದ ಪ್ರತ್ಯಕ್ಷದರ್ಶಿಗಳು ಡೆಲಿವರಿ ಬಾಯ್ ತನ್ನ ಡೆಲಿವರಿ ಐಟಂ ಅನ್ನು ಸ್ವೀಕರಿಸಲು ಬಹಳ ಸಮಯದಿಂದ ಕಾಯುತ್ತಿದ್ದರು ಎಂದು ಹೇಳಿದರು.

ಝೊಮ್ಯಾಟೊ (@zomato), ಬೆಂಗಳೂರು ಪೊಲೀಸರು (@BlrCityPolice), @blrcitytraffic ಮತ್ತು ಇತರ ಅಧಿಕಾರಿಗಳ ಅಧಿಕೃತ ಎಕ್ಸ್ ಖಾತೆಗಳನ್ನು ಟ್ಯಾಗ್ ಮಾಡಿ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read