ಬಾಗಲಕೋಟೆ: ರಾಜ್ಯದಲ್ಲಿ ಹೃದಯಾಘಾತಕ್ಕೆ ಯುವ ವೈದ್ಯೆಯೊಬ್ಬರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ಲ ನಗರದ ವಿಜಯನಗರ ಬಡಾವಣೆ ನಿವಾಸಿಯಾಗಿರುವ ವೈದ್ಯೆ ಡಾ. ಪ್ರಜ್ಞಾ ಪ್ರಹ್ಲಾದರಾವ್ ಕುಲಕರ್ಣಿ(24) ಮೃತಪಟ್ಟವರು.
ಶುಕ್ರವಾರ ಪ್ರಜ್ಞಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ವಿಜಯ ಮಹಾಂತೇಶ ಆಯುರ್ವೇದಿಕ್ ಕಾಲೇಜಿನಲ್ಲಿ ಅಂತಿಮ ವರ್ಷ ವೈದ್ಯ ಪದವಿ ಪೂರ್ಣಗೊಳಿಸಿದ್ದರು. ಶುಕ್ರವಾರ ಬೆಳಗ್ಗೆ ಮನೆಯಲ್ಲಿದ್ದ ಪ್ರಜ್ಞಾ ಅವರಿಗೆ ಏಕಾಏಕಿ ಬಿಪಿ ಲೋ ಆಗಿದೆ. ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲು ಕುಟುಂಬದವರು ಮುಂದಾದರೂ ಪ್ರಯತ್ನ ಫಲಿಸಿಲ್ಲ. ಹೃದಯಾಘಾತದಿಂದ ಪ್ರಜ್ಞಾ ಅವರು ಕೊನೆಯುಸಿರೆಳೆದಿದ್ದಾರೆ.
