ಹಾಸನ: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಹಾಸನ ಹೊರವಲಯದ ಚಿಕ್ಕಕೊಂಡಗುಳದಲ್ಲಿ 21 ವರ್ಷದ ಯುವಕ ಮದನ್ ಮೃತಪಟ್ಟಿದ್ದಾರೆ.
ಮೃತ ಮದನ್ ಹಾಸನ ತಾಲೂಕಿನ ಚಟ್ನಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ತಾಯಿಯ ಜೊತೆಗೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ ಮದನ್ ಎರಡು ದಿನದ ಹಿಂದೆ ಚಿಕ್ಕಕೊಂಡಗುಳದ ಭಾವನ ಮನೆಗೆ ಬಂದಿದ್ದರು. ರಾತ್ರಿ ಮನೆಯಲ್ಲಿದ್ದಾಗ ಎದೆ ನೋವಿನಿಂದ ಮದನ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇದರೊಂದಿಗೆ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.